ನ್ಯಾನೋ ಕಡಿಮೆ ಬೆಲೆಯ ಕಾರು ಎಂದದ್ದೆ ತಪ್ಪಾಗಿದೆ: ರತನ್‌ ಟಾಟಾ

ಶನಿವಾರ, 30 ನವೆಂಬರ್ 2013 (18:32 IST)
PR
ಕಾರ್‌ ಕಾರ್‌ ಎಲ್ಲಿ ನೋಡಿದರು ಕಾರ್‌ ಎನ್ನುವ ಹಾಡಿನಂತೆ ಭಾರತದಲ್ಲಿ ಎಲ್ಲಾ ಕಡೆ ಕಾರ ಒಡಾಡುವಂತೆ ಮಾಡಿದ ಟಾಟಾ ಕಂಪೆನಿಗೆ ಈಗ ಜ್ಞಾನೋದಯವಾಗಿದೆಯಂತೆ. ದೇಶದ ಅತಿ ಕಡಿಮೆ ಬೆಲೆಯ ಕಾರು ನ್ಯಾನೊ ಕಾರು ಎಂದು ಪ್ರಚಾರ ಪಡಿಸಲಾಗಿತ್ತು. ಆದರೇ ಇದೇ ಪ್ರಚಾರ ಮಾಡಿದ್ದೆ ತಪ್ಪಾಗಿದೆ ಎಂದು ಟಾಟಾ ಸಮೂಹದ ಮಾಜಿ ಮುಖ್ಯಸ್ಥ ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಟಿವಿ ವಾಹಿನಿಗೆ ನಿಡಿದ ಸಮದರ್ಶನದಲ್ಲಿ ರತನ್ ಟಾಟಾ ಹೇಳಿದ್ದಾರೆ. ವಿಶ್ವದ ಅತಿ ಕಡಿಮೆ ಬೆಲೆಯ ಕಾರು ಇದಾಗಿದೆ ಎಂದು ಪ್ರಚಾರ ಮಾಡಿದ್ದು ಒಂದು ದೊಡ್ಡ ತಪ್ಪಾಗಿದೆ ಎಂದು ರತನ್ ಟಾಟಾ ಅಭಿಪ್ರಾಯ ಪಟ್ಟಿದ್ದಾರೆ.

ಈ ಕಡಿಮೆ ಬೆಲೆಯ ನ್ಯಾನೋ ಕಾರು 2009ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಪ್ರಾರಂಭದಲ್ಲಿ ಕಾರುನ ಮಾರಾಟ ಭರದಿಂದ ಸಾಗಿತ್ತು. ಇದಕ್ಕೆ ಕಾರಣ ಈ ಕಾರು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಪ್ರಚಾರ ಮಾಡಲಾಗಿತ್ತು. ಆದರೆ ವಿಚಿತ್ರ ಎಂದರೆ ಈಗಲೂ ಕೂಡ ನ್ಯಾನೋ ಕಾರು ಎಂದರೆ ಕಡಿಮೆ ಬೆಲೆಯ ಕಾರು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಕಡಿಮೆ ಬೆಲೆಯ ಕಾರು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ನ್ಯಾನೋ ಕಾರನ್ನು ಜನರು ನೆಗೆಟಿವ್‌ವಾಗಿ ನೋಡಹತ್ತಿದ್ದಾರೆ. ನಾವು ಈ ಹಣೆ ಪಟ್ಟಿ ಕಟ್ಟಬಾರದಿತ್ತು ಎಂದು ರತನ್‌ ಟಾಟಾ ತಿಳಿಸಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ .

ವೆಬ್ದುನಿಯಾವನ್ನು ಓದಿ