ಪೆಟ್ರೋಲ್ ದರ ಲೀಟರ್‌ಗೆ 60 ಪೈಸೆ, ಡೀಸೆಲ್ 50 ಪೈಸೆ ಹೆಚ್ಚಳ

ಶುಕ್ರವಾರ, 28 ಫೆಬ್ರವರಿ 2014 (19:18 IST)
PR
PR
ನವದೆಹಲಿ: ಪೆಟ್ರೋಲ್ ದರವನ್ನು ಲೀಟರ್‌ಗೆ ತೆರಿಗೆರಹಿತವಾಗಿ 60 ಪೈಸೆ ಹೆಚ್ಚಿಸಲಾಗಿದ್ದು, ಡೀಸೆಲ್ ದರವನ್ನು ಲೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.ಇಂಧನ ದರಗಳನ್ನು ಜನವರಿ 31ರಂದು ಪರಿಷ್ಕರಿಸಲಾಗಿತ್ತು. ಆಗ ಡೀಸೆಲ್ ಲೀಟರ್‌ಗೆ 50 ಪೈಸೆ ದುಬಾರಿಯಾಗಿದ್ದರೆ, ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.ಪೆಟ್ರೋಲ್ ದರವು ಮಾರುಕಟ್ಟೆ ನಿರ್ಧರಿತವಾಗಿದ್ದರೆ, ಡೀಸೆಲ್ ದರದ ಮೇಲೆ ಸರ್ಕಾರದ ನಿಯಂತ್ರಣವಿದ್ದು, ಪ್ರತಿ ತಿಂಗಳು ಸಣ್ಣ ಪರಿಷ್ಕರಣೆಗೆ ಅವಕಾಶ ನೀಡುತ್ತದೆ.

ಇಂಧನದ ಮಾರಾಟದ ಇಡೀ ನಷ್ಟಗಳು ನಿವಾರಣೆಯಾಗುವ ತನಕ ಪ್ರತಿ ತಿಂಗಳು 50 ಪೈಸೆ ಹೆಚ್ಚಿಸುವುದಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಡೀಸೆಲ್ ದರ ಹೆಚ್ಚಳ ಅನುಗುಣವಾಗಿದೆ.

ವೆಬ್ದುನಿಯಾವನ್ನು ಓದಿ