ಪ್ರಪ್ರಥಮ ಮಹಿಳಾ ಬ್ಯಾಂಕ್‌ ಉದ್ಘಾಟಿಸಿದ ಸೋನಿಯಾ ಗಾಂಧಿ

ಮಂಗಳವಾರ, 19 ನವೆಂಬರ್ 2013 (16:25 IST)
PR
ದೇಶದ ಮೊಟ್ಟ ಮೊದಲ ಮಹಿಳಾ ಬ್ಯಾಂಕ್ ಇಂದಿನಿಂದ ಪ್ರಾರಂಭವಾಗಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌, ಹಣಕಾಸು ಮಂತ್ರಿ ಪಿ.ಚಿದಂಬರಂ ಮತ್ತು ಸೋನಿಯಾ ಗಾಂಧಿ ಈ ಬ್ಯಾಂಕ್‌ ಉದ್ಘಾಟನೆ ಮಾಡಿದ್ದಾರೆ. ಇಂದು ಲಖನೌ, ಕೊಲಕತ್ತಾ. ಚೆನ್ನೈ, ಅಹಮದಾಬಾದ, ಗುವಾಹಟಿ, ಮತ್ತು ಮುಂಬೈ ನಗರಗಳಲ್ಲಿ ಮಹಿಳಾ ಬ್ಯಾಂಕ್‌ನ ಶಾಖೆಗಳನ್ನು ತಗೆಯಲಾಗಿದೆ. ಇದರ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಲಿದೆ.

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಸಧ್ಯಕ್ಕೆ ದೆಹಲಿ ಮತ್ತು ಇಂದೋರ್‌ನಲ್ಲಿ ಹೊಸ ಶಾಖೆ ತಗೆಯಲು ಆಗಿಲ್ಲ. ದೆಹಲಿ ಮತ್ತು ಇಂದೋರ್‌ನಲ್ಲಿ ಮಹಿಳಾ ಬ್ಯಾಂಕ್ ತೆಗೆಯುವ ಪ್ರಸ್ಥಾವನೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ದೇಶ್ಯಾದ್ಯಂತ 31 ಮಾರ್ಚ್ 2014ರವರೆಗೆ ಒಟ್ಟು 25 ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಮುಂದಿನ 4 ವರ್ಷದ ನಂತರ 500 ಶಾಖೆ ತಗೆಯಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ