ಪ್ರಮುಖ ವಾಣಿಜ್ಯ ಅಧಿಕಾರಿಗಳ ನಿವೃತ್ತಿ

ಗುರುವಾರ, 27 ಡಿಸೆಂಬರ್ 2007 (17:32 IST)
ಭಾರತೀಯ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ಲಾಭ ತರುವ ಮೂರು ಪ್ರಮುಖ ಆಯಕಟ್ಟಿನ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರ ಹುದ್ದೆ ಮುಂದಿನ ವರ್ಷ ಕೊನೆಗೊಳ್ಳಲಿರುವುದರಿಂದ, ಈ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳ ತಲಾಷೆ ಈಗಿನಿಂದಲೇ ಆರಂಭವಾಗಿದೆ.

ಸೆಕ್ಯೂರಿಟಿ ಎಕ್ಸ್‌ಛೆಂಜ್ ಬ್ಯಾಂಕ್ ಆಫ್ ಇಂಡಿಯಾ (ಸೆಬಿ)ದ ಮುಖ್ಯಸ್ಥ ಎಂ ದಾಮೋದರನ್ ಅವರ ಸೇವಾವಧಿ ಇನ್ನು ಒಂದುವರೆ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳ ಹುಟುಕಾಟ ಈಗಿನಿಂದಲೇ ಆರಂಭವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.

ಇನ್ನೊಂದು ಪ್ರಮುಖ ವಾಣಿಜ್ಯ ವಲಯವಾದ ಇನ್ಸೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲೆಪ್‌ಮೆಂಟ್ ಅಥಾರಿಟಿ (ಐಐರ್‌ಡಿಎ) ಮುಖ್ಯಸ್ಥರಾಗಿರುವ ಸಿ.ಎಸ್. ರಾವ್ ಅವರು 2008ರ ಜೂನ್ ವೇಳೆಗೆ ನಿವೃತ್ತಿಗೊಳ್ಳಲಿದ್ದರೆ, ಭಾರತದ ಎಲ್ಲಾ ಬ್ಯಾಂಕ್‌ಗಳನ್ನು ನಿಯಂತ್ರಿಸುವ ಪ್ರಮಖ ವಾಣಿಜ್ಯ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ವೈ.ವಿ.ರೆಡ್ಡಿ ಅವರ ಐದು ವರ್ಷಗಳ ಕಾಲಾವಧಿ 2008ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ಈ ಮೂರು ಪ್ರಮಖ ಹುದ್ದೆಗಳಿಗೆ ಸೂಕ್ತ ಮತ್ತು ಹಿರಿಯ ಅಧಿಕಾರಿಗಳ ಶೋಧನೆಯನ್ನು ಸರಕಾರ ಈಗಿನಿಂದಲೇ ಆರಂಭಿಸಿದ್ದು, ಕೆಲವು ಪ್ರಮುಖ ಅಧಿಕಾರಿಗಳ ಹೆಸರುಗಳು ಕೇಳಿ ಬರುತ್ತಿವೆ.

ವೆಬ್ದುನಿಯಾವನ್ನು ಓದಿ