ಫ್ರಾನ್ಸ್‌‌ ರೈಲ್ವೆ ಹಳಿಗಳನ್ನು ನಿರ್ಮಿಸಲಿದೆ : ಟಾಟಾ ಸ್ಟೀಲ್‌ ಕಂಪೆನಿ

ಗುರುವಾರ, 9 ಜನವರಿ 2014 (16:46 IST)
PR
ಲಂಡನ್: ಫ್ರಾನ್ಸ್‌‌ ರೈಲ್ವೆ ಹಳಿಗಳನ್ನು ಭಾರತ ಮೋಲದ ಟಾಟಾ ಸ್ಟೀಲ್‌ ಕಂಪೆನಿ ಉತ್ಪಾದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 2,00,000 ಟನ್‌‌ ಗಿಂತ ಹೆಚ್ಚಿನ ಉಕ್ಕನ್ನು ಟಾಟಾ ಕಂಪೆನಿ ಪೂರೈಸಲು ಫ್ರಾನ್ಸ್‌‌ ದೇಶ ಜೊತೆಗೆ ಎರಡು ವರ್ಷದ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಫ್ರಾನ್ಸ್‌‌ ದೇಶದ ರಾಷ್ಟ್ರೀಯ ರೈಲ್ವೆ ಕಂಪೆನಿಯಾದ ಎಸ್‌‌ಎನ್‌‌‌ಸಿಎಫ್‌‌‌ನ ರೈಲಿಗೆ ಬೇಕಾಗುವ ಸ್ಟೀಲ್‌ ಟಾಟಾ ಪೂರೈಸಲಿದೆ. ಈ ಸ್ಟೀಲ್‌‌ ಟಾಟಾ ಸ್ಟೀಲ್‌ ಕಂಪೆನಿಯ ಬ್ರಿಟನ್‌‌ ಕಾರ್ಖಾನೆಯಿಂದ ಪೂರೈಸಲಾಗುವುದು ಎಂದು ಟಾಟಾ ಕಂಪೆನಿಯ ಮೂಲಗಳು ತಿಳಿಸಿವೆ.

" ನಾವು ಎಸ್‌‌‌ಎನ್‌‌ಸಿಎಫ್‌‌‌ ಬೇಡಿಕೆಗನುಗುಣವಾಗಿ 108 ಮೀಟರ್‌ ಉದ್ದದ ರೈಲ್ವೆಯ ಉತ್ಪಾದನೆಗೆ ಸಾಕಷ್ಟು ಬಂಡವಾಳ ಹೂಡಲಾಗಿದೆ. 108 ಮೀಟರ್‌‌ ಉದ್ದದ ರೈಲ್ವೆ ಹಳಿ ಗಳನ್ನು ಪೂರೈಸಲಾಗುವದು " ಎಂದು ಟಾಟಾ ಕಂಪೆನಿಯ ಮುಖ್ಯ ವಾಣಿಜ್ಯ ಅಧಿಕಾರಿ ಹೆನ್‌ರಿಕ ಎಡಮ್‌‌ ತಿಳಿಸಿದ್ದಾರೆ .

ವೆಬ್ದುನಿಯಾವನ್ನು ಓದಿ