ಬ್ಯಾಂಕ್‌ ಬಂದ್‌ : 800 ಕೋಟಿ ರೂಪಾಯಿ ವ್ಯವಹಾರ ಸ್ಥಗಿತ

ಮಂಗಳವಾರ, 11 ಫೆಬ್ರವರಿ 2014 (15:55 IST)
PR
ಜಾಲಂಧರ್ ( ಪಂಜಾಬ್): ಸರ್ಕಾರಿ ಬ್ಯಾಂಕ್‌‌ಗಳ ಮುಷ್ಕರದ ಮೊದಲನೇ ದಿನ ಜಾಲಂಧರ್‌ ಜಿಲ್ಲೆಯಲ್ಲಿ ಸುಮಾರು 800 ಕೋಟಿ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ. ಇದರಲ್ಲಿ ಚೆಕ್‌‌ ಮತ್ತು ನಗದು ಹಣ ಕೂಡ ಸೇರಿವೆ.

ಯುನೈಟೆಡ್‌‌‌ ಫೋರಂ ಆಫ್‌ ಬ್ಯಾಂಕ್‌ ಯುನಿಯನ್‌‌‌ರ ಮುಷ್ಕರದಿಂದ ಜಾಲಂಧರ್‌‌ ಜಿಲ್ಲೆಯಲ್ಲಿಯೇ ಸುಮಾರು 700 ಕೋಟಿ ರೂಪಾಯಿಯ ವಹಿವಾಟು ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜಾಲಂಧರ್ ಜಿಲ್ಲೆಯಲ್ಲಿಯೇ ಬ್ಯಾಂಕಗಳ ಎಲ್ಲಾ ಶಾಖೆಗಳ ವಹಿವಾಟು ಸ್ಥಗಿತಗೊಳಿಸಿರುವುದರಿಂದ ಸುಮಾರು 700 ಕೋಟಿ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ ಎಂದು ಯುನಿಯನ್‌‌‌‌ನ ಜಾಲಂಧರ್ ಸಂಯೋಜಕ ಅಮೃತ್‌ ಲಾಲ್ ತಿಳಿಸಿದ್ದಾರೆ. ಈ ಕಾರಣದಿಂದ ಪೂರ್ತಿ ಜಿಲ್ಲೆಯಲ್ಲಿ 800 ಕೋಟಿ ರೂಪಾಯಿಗಳ ವಹಿವಾಟು ನಡೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ವೆಬ್ದುನಿಯಾವನ್ನು ಓದಿ