ಭಾರತದಲ್ಲಿ ಒಂದು ವರ್ಷಕ್ಕೆ 13,000 ಕೋಟಿ ರೂಪಾಯಿಯ ತರಕಾರಿ ಹಾಳಾಗುತ್ತದೆ

ಶನಿವಾರ, 30 ನವೆಂಬರ್ 2013 (18:29 IST)
PR
ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಗಗನಕ್ಕೆರುತ್ತಿವೆ. ಕಾರಣ ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದೆ. ಇಷ್ಟಿದ್ದಾಗಲೂ ಕೂಡ ಭಾರತದಲ್ಲಿ ಪ್ರತಿ ವರ್ಷ 13,300 ಕೋಟಿ ರೂಪಾಯಿಯ ತರಕಾರಿ ಹಾಳಾಗುತ್ತಿದೆ ಎಂದು ವರದಿಯೋಂದು ತಿಳಿಸಿದೆ. ತರಕಾರಿ ಹಾಳಾಗೊಕ್ಕೆ ಕಾರಣ ಸರಿಯಾದ ಸಂಗ್ರಹ ಇಲ್ಲ ಮತ್ತು ಶೀತಲಿಕರಣದ ಕೊರತೆ ಎಂದು ವರದಿ ತಿಳಿಸಿದೆ. ಅಮೆರಿಕಾದ ಎಮರ್ಸನ್ ಆಧಾರಿತ ತಂತ್ರಜ್ಞಾನ ಸಂಸ್ಥೆಯೋಂದು ಈ ವಿಷಯ ಬಹಿರಂಗ ಪಡಿಸಿದೆ.

ವಿಶ್ವದಲ್ಲಿ ತರಕಾರಿ ಮತ್ತು ಹಣ್ಣುಗಲ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಭಾರತ ಇದೆ. ಭಾರತದಲ್ಲಿ ಪ್ರತಿ ವರ್ಷ 133 ಅರಬ್‌‌ ಡಾಲರ ಮೌಲ್ಯದ ತರಕಾರಿ ಹಾಳಾಗುತ್ತಿದೆ. ಇದಕ್ಕೆಲ್ಲ ಕಾರನವೆಂದರೆ ಭಾರತದಲ್ಲಿ ತರಕಾರಿ ಸಂಗ್ರಹ ಮಾಡಲು ಉತ್ತಮ ಶೀತಲಿಕರಣದ ಕೊರತೆ ಎಂದು ಎಮರರ್ಸನ್ ಕ್ಲಾಯಿಮೆಟ್‌ ಟೆಕ್ನಾಲೋಜಿ ಇಂಡಿಯಾ ತಿಳಿಸಿದೆ.

ನಮ್ಮ ದೇಶ ಕೃಷಿ ಪ್ರಧಾನ ದೇಶ. ಇಲ್ಲಿ ತರಕಾರಿಗಳಿಗೆ ಕೊರತೆ ಇಲ್ಲ ಆದರೂ ಕೂಡ ಬೆಲೆ ಹೆಚ್ಚಳ ಆಗುತ್ತಿದೆ. ಇದಕ್ಕೆಲ್ಲ ನಮ್ಮ ದೇಶದಲದಲ್ಲಿ ಎಲ್ಲಾಕಡೆ ಶೀತಲಿಕರಣದ ವ್ಯವಸ್ಥೆ ಇಲ್ಲ. ಇದರಿಂದ ರೈತರು ಬೆಳೆದ ಬೆಳೆ ಸಂಗ್ರಹಿಸಲು ಶೀತಲಿಕರನದ ಉಗ್ರಾಣಗಳು ಇಲ್ಲ. ಸರ್ಕಾರ ಕೂಡ ಇದರ ಬಗಬಗೆ ಹೆಚ್ಚಿನ ಗಮನ ಹರಿಸದ ಕಾರಣ ಪ್ರತಿ ವರ್ಷ ದೇಶದಲ್ಲಿ 13,000 ಕೋಟಿ ರೂಪಾಯಿಯ ತರಕಾರಿ ಹಾಳಾಗುತ್ತದೆ.

ವೆಬ್ದುನಿಯಾವನ್ನು ಓದಿ