ಭಾರತದಲ್ಲಿ ಚಾಲನಾ ತರಬೇತಿ ನೀಡಲಿದೆ ಪ್ರತಿಷ್ಟಿತ ಫೆರಾರಿ

ಸೋಮವಾರ, 31 ಅಕ್ಟೋಬರ್ 2011 (18:20 IST)
ಭಾರತದಲ್ಲಿ ಮೊತ್ತಮೊದಲ ಬಾರಿಗೆ ಫಾರ್ಪುಲಾ ಒನ್ ರೇಸ್ ಆರಂಭಿಸುವಲ್ಲಿ ಯಶಸ್ವಿಯಾದ ಇಟಲಿ ಮೂಲದ ಪ್ರತಿಷ್ಟಿತ ಕಾರು ತಯಾರಕ ಕಂಪನಿ ಫೆರಾರಿ, ಆರಂಭಿಕ ರೇಸಿಂಗ್ ನಡೆದ ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯುಟ್ ಟ್ರ್ಯಾಕ್‌ನಲ್ಲಿ ಇನ್ನು ಮುಂದೆ ಸರಣಿ ರೇಸಿಂಗ್ ಚಾಂಪಿಯನ್‌ ಶಿಪ್ ಆರಂಭಿಸುವ ಯೋಜನೆಯಿರುವುದಾಗಿ ತಿಳಿಸಿದೆ. ಈ ಮೂಲಕ ತನ್ನ ಕಾರುಗಳ ಮಾರಾಟ ವೃದ್ದಿಸುವುದರೊಂದಿಗೆ, ಮಾಲೀಕರಿಗೆ ನೂತನ ಕಾರುಗಳ ಚಾಲನಾ ತರಬೇತಿ ನೀಡುವುದಾಗಿಯೂ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ವರ್ಷದ ಆರಂಭದಲ್ಲಿ ಶ್ರೇಯನ್ಸ್ ಗ್ರೂಪ್‌ನ ಅಧಿಕೃತ ರಫ್ತಿನೊಂದಿಗೆ ಭಾರತಕ್ಕೆ ಕಾಲಿಟ್ಟ ಫೆರಾರಿ, ಸೋಮವಾರ ನಾಲ್ಕು ಸೀಟುಗಳನ್ನೊಳಗೊಂಡ ಎಫ್ಎಫ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆರಂಭಿಕ ಬೆಲೆ 3.42 ಕೋಟಿ!

ಫಾರ್ಪುಲಾ ಒನ್ ರೇಸ್ ಆರಂಭಿಸಿದರಿಂದ ಭಾರತದಲ್ಲಿ ಫೆರಾರಿ ಕಾರುಗಳಿಗೆ ಅಭಿಮಾನಿಗಳು ಸಾಕಷ್ಟಿರುವುದು ಸ್ಪಷ್ಟವಾಗಿದ್ದು, ವಿಶ್ವ ಪ್ರಸಿದ್ದ ಫೆರಾರಿ ಕಾರುಗಳು ಭಾರತದಲ್ಲಿ ಯಶಸ್ವಿಯಾಗಿ ಮಾರಾಟವಾಗುವ ವಿಶ್ವಾಸವಿರುವುದಾಗಿ ಭಾರತದ ಅಧಿಕೃತ ವಿತರಕ ಶ್ರೇಯನ್ಸ್ ಸಮೂಹ ತಿಳಿಸಿದೆ.

ಫೆರಾರಿ ಸರಣಿ ರೇಸಿಂಗ್ ಮತ್ತು ಗ್ರಾಹಕರಿಗೆ ಚಾಲನಾ ತರಬೇತಿ ನೀಡುವ ಕುರಿತು ಮುಂದಿನ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಶ್ರೇಯನ್ಸ್ ಸಮೂಹ ತಿಳಿಸಿದೆ.

ವೆಬ್ದುನಿಯಾವನ್ನು ಓದಿ