ಭಾರತದಲ್ಲಿ ಬದುಕಲು ಅತ್ಯುತ್ತಮ ಸ್ಥಳ ನಮ್ಮ ಬೆಂಗ್ಳೂರು

ಮಂಗಳವಾರ, 29 ನವೆಂಬರ್ 2011 (20:12 IST)
ಜೀವಿಸಲು ಯೋಗ್ಯವಾದ ಭಾರತದ ಮಹಾನಗರಗಳಲ್ಲಿ ಬೆಂಗಳೂರು ಅತ್ಯುತ್ತಮ ಸ್ಥಳ ಎಂದು ಇತ್ತೀಚಿನ ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇತರ ಮಹಾ ನಗರಗಳಾದ ದೆಹಲಿ, ಮುಂಬಯಿ, ಕೊಲ್ಕತಾ ಮತ್ತು ಚೆನ್ನೈಗೆ ಹೋಲಿಸಿದರೆ ಸಿಲಿಕಾನ್ ಸಿಟಿಯ ಜೀವನ ಉನ್ನತ ಗುಣಮಟ್ಟದಿಂದ ಕೂಡಿರುವುದಾಗಿ ಜಾಗತಿಕ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಮೆರ್ಸರ್ ಸಮೀಕ್ಷೆ ತಿಳಿಸಿದೆ.

ವಿಶ್ವದ ಸುಮಾರು 221 ಮಹಾನಗರಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ. ಜಾಗತಿಕವಾಗಿ ಹೋಲಿಸಿದರೆ ಬೆಂಗಳೂರು ತೀರಾ ಕೆಲ ಹಂತದ ಜೀವನ ಮಟ್ಟವನ್ನು ಹೊಂದಿದ್ದು, ಭಾರತದ ಮಹಾನಗರಗಳಿಗೆ ಹೋಲಿಸಿದಾಗ ಬೆಂಗಳೂರು ಪ್ರಥಮ ಸ್ಥಾನ ಹೊಂದಿದೆ.

ಪ್ರತಿಷ್ಟಿತ ಹಾಗೂ ಗುಣಮಟ್ಟದ ಜೀವನ ನಡೆಸುವಲ್ಲಿ ವಿಯೆನ್ನಾ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರು 141 ನೇ ಸ್ಥಾನದಲ್ಲಿದೆ. ದೆಹಲಿ 143, ಮುಂಬಯಿ 144, ಚೆನ್ನೈ 150 ಮತ್ತು ಕೊಲ್ಕತಾ 151 ನೇ ಸ್ಥಾನದೊಂದಿಗೆ ಸಮಾಧಾನಕರ ಜೀವನಮಟ್ಟವನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ