ಭಾರತೀಯ ಐಟಿ ಕಂಪನಿಗಳ ಆಸಾಧಾರಣ ಬೆಳವಣಿಗೆ

ಶುಕ್ರವಾರ, 28 ಸೆಪ್ಟಂಬರ್ 2007 (11:43 IST)
ಭಾರತದ ಆರು ಅಗ್ರ ಐಟಿ ಕಂಪನಿಗಳು 2006ರಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ 672 ಶತಕೋಟಿ ಡಾಲರ್ ಗಳಿಸಿವೆ. ಇದು ಜಾಗತಿಕ ಐಟಿ ಸೇವಾಕ್ಷೇತ್ರದ ಶೇ 1.9ರಷ್ಟು ಮಾತ್ರ.

ಜಾಗತಿಕ ಮಟ್ಟದ ಐಬಿಎಂ ಮೈಕ್ರೊಸಾಪ್ಟ್ ಕಂಪನಿಗಳಿಗೆ ಹೋಲಿಸಿದಲ್ಲಿ, ಈ ಭಾರತೀಯ ಕಂಪನಿಗಳು ಚಿಕ್ಕವು. 2006 ಈ ಕಂಪನಿಗಳು ಸೇವಾಕ್ಷೇತ್ರದಲ್ಲಿ ಮಾಡಿರುವ ವ್ಯಾಪಾರ ನಿರೀಕ್ಷೆ ಮೀರಿ ಇದೆ ಎಂದು ಗಾರ್ಟ್ನರ್ ಅದ್ಯಯನ ಸಂಸ್ಥೆ ತನ್ನ ಅದ್ಯಯನ ವರದಿಯಲ್ಲಿ ತಿಳಿಸಿದೆ.

ಭಾರತದ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಕಾಗ್ನಿಜಂಟ್, ಸತ್ಯಮ್ ಮತ್ತು ಎಚ್‌ಸಿಎಲ್ ಕಂಪನಿಗಳ ಒಟ್ಟು ವ್ಯಾಪಾರ 2006ರಲ್ಲಿ, 672 ಶತಕೋಟಿ ಡಾಲರ್ ಆಗಿದ್ದರೆ, 2001ರಲ್ಲಿ ಇದೇ ಕಂಪನಿಗಳ ವಹಿವಾಟು 554 ಶತಕೋಟಿ ಡಾಲರ್ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಮೆರಿಕ ಮೂಲದ ಬೃಹತ್ ಕಂಪನಿಗಳಿಗೆ ಹೋಲಿಸಿದಲ್ಲಿ ಚಿಕ್ಕ ಕಂಪನಿಗಳ ಲೆಕ್ಕದಲ್ಲಿ ಬರುವ ಭಾರತೀಯ ಮೂಲದ ಕಂಪನಿಗಳು ಮಾಡಿರುವ ವ್ಯಾಪಾರ ಮತ್ತು ಮಾರುಕಟ್ಟೆಯಲ್ಲಿನ ಬೃಹತ್ ಕಂಪನಿಗಳ ಪಾಲನ್ನು ಕಿತ್ತುಕೊಳ್ಳಲು ಇದುವರೆಗೆ ನಡೆಸಿರುವ ಪ್ರಯತ್ನದಲ್ಲಿ ಯಶಸ್ವಿಯಾಗಿವೆ. ಅವುಗಳ ವಾರ್ಷಿಕ ಆದಾಯದಲ್ಲಿ ಆಗಿರುವ ಗಣನೀಯ ಬೆಳವಣಿಗೆ ಇದಕ್ಕೆ ಸಾಕ್ಷಿ ಎಂದು ಅದ್ಯಯನ ವರದಿ ಹೇಳಿದೆ.

SWITCH ಎಂದು ಕರೆಯಲಾಗುವ ಈ ಆರು ಕಂಪನಿಗಳ ಸರಾಸರಿ ಒಟ್ಟು ಆದಾಯ 2006ರಲ್ಲಿ ಪ್ರತಿಶತ 42.4 ರಂತೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಇತರ ಜಾಗತಿಕ ಐಟಿ ಕಂಪನಿಗಳ ಆದಾಯದಲ್ಲಿ ಕೇವಲ ಪ್ರತಿಶತ 4.3ರಷ್ಟು ಅಭಿವೃದ್ದಿಯಾಗಿದೆ ಎಂದು ಅದು ತಿಳಿಸಿವೆ.

ವೆಬ್ದುನಿಯಾವನ್ನು ಓದಿ