ಭಾರತೀಯ ಮೊಬೈಲ್ ಬಳಕೆದಾರರ ಸಂಖ್ಯೆ 903.09 ಮಿಲಿಯನ್

ಶುಕ್ರವಾರ, 6 ಸೆಪ್ಟಂಬರ್ 2013 (16:32 IST)
PTI
ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಆಗಸ್ಟ್ ಅಂತ್ಯಕ್ಕೆ 903.09 ಮಿಲಿಯನ್‌ಗಳಿಗೆ ತಲುಪಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ 15 ಲಕ್ಷ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.

ವಿಚಿತ್ರವೆಂದರೆ ನಗರದ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಶೇ.60.40 ರಷ್ಟು ಕುಸಿತವಾಗಿದ್ದು, ಗ್ರಾಮೀಣ ಭಾಗದಲ್ಲಿ ಶೇ.39 ರಷ್ಟು ಏರಿಕೆಯಾಗಿದೆ.

ಗ್ರಾಮೀಣ ಭಾಗದ ಮೊಬೈಲ್ ಚಂದಾದಾರರ ಸಂಖ್ಯೆ 354.75 ಮಿಲಿಯನ್‌ಗಳಿಂದ 357.61 ಮಿಲಿಯನ್‌ಗಳಿಗೆ ಏರಿಕೆಯಾಗಿದೆ. ಮಾಸಿಕವಾಗಿ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಶೇ.0.03 ರಿಂದ ಶೇ.0.81 ರಷ್ಟು ಏರಿಕೆಯಾಗಿದೆ.

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಖಾಸಗಿ ಮೊಬೈಲ್ ಕಂಪೆನಿಗಳು ಶೇ. 88.26 ರಷ್ಟು ಪಾಲು ಹೊಂದಿವೆ. ಸರಕಾರಿ ಸ್ವಾಮ್ಯದ ಮೊಬೈಲ್ ಕಂಪೆನಿಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೇವಲ ಶೇ.11.74 ರಷ್ಟು ಪಾಲು ಹೊಂದಿವೆ.

ವೆಬ್ದುನಿಯಾವನ್ನು ಓದಿ