ಭಾರತ್ ಪೆಟ್ರೋಲಿಯಂ ಷೇರು ಸೆಲ್‌ನಿಂದ ಖರೀದಿ

ಶುಕ್ರವಾರ, 30 ನವೆಂಬರ್ 2007 (15:03 IST)
ನಷ್ಟದಲ್ಲಿ ಮುನ್ನಡೆಯುತ್ತಿರುವ ಸರಕಾರಿ ಸ್ವಾಮ್ಯದ ತೈಲ ಕಂಪೆನಿಯಾದ ಭಾರತ ಪೆಟ್ರೋಲಿಯಂನ ಶೇಕಡಾ 49ರಷ್ಟು ಈಕ್ವಿಟಿ ಷೇರುಗಳನ್ನು ಸೆಲ್ ತೈಲ ಸಂಸ್ಥೆಗೆ ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, 1.5ಶತಕೋಟಿ ರೂಪಾಯಿಗೆ ಬಿಪಿಸಿಎಲ್ ಷೇರುಗಳನ್ನು ಮಾರಾಟ ಮಾಡಲು ಸರಕಾರ ಮುಂದೆ ಬಂದಿದೆ.

ಈ ಷೇರುಗಳ ಮಾರಾಟದಿಂದಾಗಿ ಜಂಟಿ ಸಹಭಾಗಿತ್ವದಿಂದ ಹೊರ ಬಂದಿರುವ ಬಿಪಿಸಿಎಲ್ ಕಂಪೆನಿ ಇನ್ನೂ ಮುಂದೆ ಪೂರ್ಣ ಪ್ರಮಾಣದ ಲಾಭದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಸರಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದರೂ, ದೇಶಿಯ ಇಂಧನ ಮಾರಾಟ ಬೆಲೆಯನ್ನು ಏರಿಸಲು ಸರಕಾರ ನಿರ್ಧರಿಸದ್ದರಿಂದಾಗಿ ತೈಲ ಕಂಪೆನಿಗಳು ನಷ್ಟದತ್ತ ವಾಲುತ್ತಿರುವುದನ್ನು ಗಮನಿಸಬಹುದು.

ವೆಬ್ದುನಿಯಾವನ್ನು ಓದಿ