ಭಾರತ ಉದ್ಯಮ ವಿದೇಶಿ ಉದ್ಯಮಿಗಳ ಪಾಲಿಗೆ ಕಾಮಧೇನು

ಸೋಮವಾರ, 25 ನವೆಂಬರ್ 2013 (12:15 IST)
PTI
ವಿದೇಶಿ ಬಂಡವಾಳವನ್ನು ಆಕರ್ಷಿಸುವಲ್ಲಿ ಒಂದು ಕಾಲದಲ್ಲಿ ಹಿಂದೆ ಬಿದ್ದಿದ್ದ ಭಾರತವೀಗ ಉದ್ಯಮಿಗಳ ಪಾಲಿಗೆ ಆಕರ್ಷಕ ಹೂಡಿಕೆ ತಾಣವಾಗಿ ಬದಲಾಗುತ್ತಿದೆ!

ಹೂಡಿಕೆಗೆ ಅತ್ಯುತ್ತಮ ತಾಣಗಳೆಂದು ಪರಿಗಣಿಸಲ್ಪಟ್ಟಿದ್ದ ಅಮೆರಿಕ ಹಾಗೂ ಚೀನಾವನ್ನೂ ಭಾರತ ಹಿಂದಿಕ್ಕಿದೆ. ಹೌದು. ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಸಂಬಂಧಿಸಿದ ನಿಯಮಾವಳಿ ಸಡಿಲಗೊಳಿಸುವ ಮೂಲಕ ಭಾರತವು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.

ಖ್ಯಾತ ಕನ್ಸಲ್ಟೆನ್ಸ್ ಕಂಪನಿ ಅನ್ಸ್‌ಸ್ಟ್ ಆಂಡ್ ಯಂಗ್(ಇವೈ) ನಡೆಸಿದ ಅಂತಾರಾಷ್ಟ್ರೀಯ ಸರ್ವೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಸರ್ವೆಯ ಬಳಿಕ ಸಿದ್ಧಪಡಿಸಿದ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಸಿಕ್ಕರೆ 2ನೆ ಸ್ಥಾನ ಬ್ರೆಜಿಲ್ ಮತ್ತು ಮೂರನೇ ಸ್ಥಾನ ಚೀನಾ ಪಾಲಾಗಿದೆ.

ಕೆನಡಾ ಹಾಗೂ ಅಮೆರಿಕ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ. ರುಪಾಯಿ ಮೌಲ್ಯಕುಸಿತ ಹಾಗೂ ಎಫ್‌ಡಿಐ ನಿಯಮಾವಳಿ ಸಡಿಲಿಕೆಯಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾರತದತ್ತ ಆಕರ್ಷಿತರಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ