ಭುಟ್ಟೋ ಹತ್ಯೆ ಪರಿಣಾಮ - ತೈಲ ಬೆಲೆ ಏರಿಕೆ

ಶುಕ್ರವಾರ, 28 ಡಿಸೆಂಬರ್ 2007 (16:11 IST)
ಪಾಕ್ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ನಂತರ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ತೈಲ ಬೆಲೆಯಲ್ಲಿ ಆತಂಕದ ವಾತಾವರಣ ಮೂಡಿಸಿತು. ಇದರಿಂದ ತೈಲ ಬೆಲೆಯು ಏರಿಕೆಯಾಯಿತು.

ಭುಟ್ಟೋ ಹತ್ಯೆ ಮಧ್ಯಪೂರ್ವ ತೈಲ ರಾಷ್ಟ್ರಗಳಲ್ಲಿ ಅಸ್ಥಿರತೆ ಮೂಡದೇ ಇರದು ಎಂದು ಲಿಬರ್ಟಿ ಟ್ರೇಡಿಂಗ್ ಗ್ರೂಪ್‌ನ ಅಧ್ಯಕ್ಷ ಜೇಮ್ಸ್ ಕಾರ್ಡಿಯರ್ ಅವರು ಅಭಿಪ್ರಾಯಪಟ್ಟಿದ್ದು, ಮುಂದಿನ ಕ್ರಮಗಳ ಕುರಿತು ಪ್ರತಿಯೊಬ್ಬರು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.

ಫೆಬ್ರುವರಿ ವಿತರಣೆ ಮಾಡಬೇಕಿದ್ದ ಲೈಟ್ ಹಾಗೂ ಸ್ವೀಟ್ ಕಚ್ಚಾ ತೈಲ ಬೆಲೆಯಲ್ಲಿ 47 ಸೆಂಟ್‌ಗಳು ಏರಿಕೆಯಾಗಿದ್ದರಿಂದ ನ್ಯೂಯಾರ್ಕ್ ತೈಲ ಮಾರುಕಟ್ಟೆಯಲ್ಲಿ ಇದರ ಬೆಲೆಯು 96.44 ಡಾಲರ್‌ ತಲುಪಿತ್ತು.

ಕಳೆದ ವಾರ ಸ್ವದೇಶಿ ಕಚ್ಚಾ ಪೂರೈಕೆಯಲ್ಲಿಯೂ ಕುಸಿತವಾಗಿದ್ದರಿಂದ, ಈ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಇದರಿಂದಾಗಿ ಕಳೆದ ವಾರ 1.3 ದಶಲಕ್ಷ ಬ್ಯಾರೆಲ್ ತೈಲ ಬೆಲೆಯು ಇಳಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ