ಮತ್ತೆ ಏರಿಕೆ: 10 ಗ್ರಾಂ ಚಿನ್ನದ ಬೆಲೆ 21,960

ಸೋಮವಾರ, 4 ಜುಲೈ 2011 (18:13 IST)
ಚಿನಿವಾರ ಪೇಟೆಯಲ್ಲಿ ಸೋಮವಾರ ಚೇತರಿಸಿಕೊಂಡಿರುವ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗಳಿಗೆ 140 ರೂ. ಹೆಚ್ಚಳವಾಗಿದ್ದು, 10 ಗ್ರಾಂ ಚಿನ್ನದ ಬೆಲೆ 21,960 ರೂ. ಆಗಿದೆ. ಬೆಳ್ಳಿಯ ಬೆಲೆ 150 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿಯ ಬೆಲೆ 51,350 ರೂ. ಆಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲಂಡನ್‌ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ಬೆಲೆ 7.22 ಡಾಲರ್ ಹೆಚ್ಚಳವಾಗಿ, 1,495 ಡಾಲರ್‌ಗೆ ತಲುಪಿದೆ. ಚಿನ್ನದ ಬೆಲೆಯು ಆರು ವಾರಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಾದ ಪರಿಣಾಮ ಬೆಲೆ ಏರಿಕೆಯಾಗಿದೆ.

ಬೆಳ್ಳಿಯ ಬೆಲೆಯ ಇಳಿಕೆ ಮೂರನೇ ದಿನವೂ ಮುಂದುವರಿದಿದ್ದು, ಮಾರಾಟಗಾರರು ಕಾದು ನೋಡುವ ತಂತ್ರ ಅನುಸರಿಸಿರುವುದೂ ಸಹ ಬೆಳ್ಳಿಯ ಬೆಲೆ ಇಳಿಕೆಯಾಗಲು ಕಾರಣ ಎನ್ನಲಾಗಿದೆ. ಶೇ.99.9 ಮತ್ತು ಶೇ.99.5 ಶುದ್ಧತೆಯ ಬಂಗಾರದ ಬೆಲೆ 140 ಏರಿಕೆಯಾಗಿರುವುದರಿಂದ ಪ್ರತಿ 10 ಗ್ರಾಂ ಚಿನ್ನದ ಬೆಲೆಯು ಕ್ರಮವಾಗಿ 21,960 ರೂ.ಹಾಗೂ 21,840 ಗಳಾಗಿದೆ. ಚಿನ್ನದ ಬೆಲೆ ಕಳೆದ ಮೂರು ದಿನಗಳಲ್ಲಿ 620 ರೂ. ಕಡಿಮೆಯಾಗಿತ್ತು.

ವೆಬ್ದುನಿಯಾವನ್ನು ಓದಿ