ಮನಮೋಹನ್ ಸಿಂಗ್ ಧೈರ್ಯದ ಮಾತಿನಿಂದ ಸೆನ್ಸೆಕ್ಸ್ ನಲ್ಲಿ ಚೇತರಿಕೆ

ಶನಿವಾರ, 31 ಆಗಸ್ಟ್ 2013 (13:34 IST)
PR
ಪ್ರಧಾನ ಮಂತ್ರಿ ಮನಮೊಹನ್ ಸಿಂಗ್ ರವರು ಸದನದಲ್ಲಿ ರೂಪಾಯಿ ಅಪಮೌಲ್ಯದ ಕುರಿತು ಮಾತನಾಡಿ ಹೂಡಿಕೆದಾರರಿಗೆ ಧೈರ್ಯ ತುಂಬಿದ ಹಿನ್ನಲೇಯಲ್ಲಿ ಮುಂಬೈ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ ಮತ್ತು 30 ಶೇರುಗಳ ಸೆನ್ಸೆಕ್ಸ್ 218.68 ಅಂಕಗಳು ಹೆಚ್ಚುವ ಮೂಲಕ ಸೆನ್ಸೆಕ್ಸ್ 18,619.72 ಕ್ಕೆ ತಲುಪಿದೆ.

ಸದನದಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಭರವಸೆ ಮತ್ತು ದೈರ್ಯದಿಂದ ರೂಪಾಯಿ ನಿಯಂತ್ರಣದಲ್ಲಿ ಬಂದಿದ್ದು ಶೇರುಮಾರುಕಟ್ಟೆಯಲ್ಲಿ ಚೇತರಿಕೆ ಕೂಡ ಕಂಡುಬಂದಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯದ ಶೇರು ಮಾರುಕಟ್ಟೆಯಲ್ಲಿ 50 ಪೈಸೆ ಹೆಚ್ಚಳವಾಗಿದೆ. ಪ್ರತಿ ಡಾಲರ್‌ಗೆ 66.05 ರೂಪಾಯಿ ಆಗಿದೆ ಆದರೆ ನಿನ್ನೆ 66.555 ರಷ್ಟು ರೂಪಾಯಿ ಮೌಲ್ಯವಿತ್ತು.

ವೆಬ್ದುನಿಯಾವನ್ನು ಓದಿ