ಮಾರುಕಟ್ಟೆ: ಚಿನ್ನದ ಬೆಲೆಯಲ್ಲಿ ಕುಸಿತ

ಮಂಗಳವಾರ, 7 ಆಗಸ್ಟ್ 2007 (19:20 IST)
ಚೇತರಿಸಿಕೊಂಡ ಶೇರು ಮಾರುಕಟ್ಟೆಯ ವ್ಯವಹಾರ ಚಿನ್ನದ ಮೇಲೆ ಪರಿಣಾಮ ಬೀರಿದ್ದು, ಬಂಡವಾಳ ಹೂಡಿಕೆದಾರರ ನಿರಾಸಕ್ತಿಯ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ 30 ರೂಗಳ ಇಳಿಕೆ ಕಂಡುಬಂದಿದೆ.

ಪ್ರತಿ ಹತ್ತು ಗ್ರಾಮ್ ಚಿನ್ನದ ಬೆಲೆಯು 8930ಕ್ಕೆ ಬಂದು ನಿಂತಿದೆ. ಶೇರು ಮಾರುಕಟ್ಟೆಯಲ್ಲಿ ಕಂಡು ಬಂದ ಚೇತರಿಕೆಯಿಂದಾಗಿ ಬಂಡವಾಳ ಹೂಡಿಕೆದಾರರು ಶೇರು ವ್ಯವಹಾರಕ್ಕೆ ಮಂದೆ ಬಂದ ಪರಿಣಾಮವಾಗಿ, ಚಿನ್ನದ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆದಾರರು ಇಲ್ಲದ್ದರಿಂದ ಚಿನ್ನದ ಬೇಡಿಕೆ ಕಡಿಮೆಯಾಗಿ, ಬೆಲೆ ಇಳಿದಿದೆ.

ದಿನದ ಮುಂಬೈ ಶೇರು ಮಾರುಕಟ್ಟೆಯು ದಿನದ ಆರಂಭಿಕ ವಹಿವಾಟಿನಲ್ಲಿ 239 ಸೂಚ್ಯಂಕಗಳ ಗಡಿ ದಾಟಿ ಚೇತರಿಸಿಕೊಂಡಿತು. ಏಷಿಯಾ ವಲಯದಲ್ಲಿ ಚಿನ್ನದ ಬೆಲೆಯಲ್ಲಿ 2.50 ಡಾಲರ್‌ಗಳ ಕುಸಿತ ಕಂಡಿದೆ.


ವೆಬ್ದುನಿಯಾವನ್ನು ಓದಿ