ಮುಂಬೈ: ಎಲ್‌ಪಿಜಿ ಸಿಲಿಂಡರ್ ವ್ಯಾಟ್ ತೆರಿಗೆ ಹಿಂದಕ್ಕೆ

ಶುಕ್ರವಾರ, 30 ಮಾರ್ಚ್ 2012 (09:42 IST)
PR
ಆಡಳಿತಾರೂಢ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಸ್‌ಸಿಪಿ ಸೇರಿದಂತೆ ಎಲ್ಲ ಮಗ್ಗುಲುಗಳಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಮೇಲೆ ಬಜೆಟ್‌ನಲ್ಲಿ ಪ್ರಸ್ತಾವಿಸಿರುವ 5 ಶೇ. ಮೌಲ್ಯ ವರ್ಧಿತ ತೆರಿಗೆಯಲ್ಲಿ 2 ಶೇ. ಹಿಂದೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ಅಜಿತ್‌ ಪವಾರ್‌ ಇಂದು ಘೋಷಿಸಿದ್ದಾರೆ.

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಮಾರಾಟದ ಮೇಲೆ ಶೇ.5ರ ಬದಲಿಗೆ ಶೇ. 3 ವ್ಯಾಟ್‌ ದರ ವಿಧಿಸುವುದಾಗಿ ಅವರು ವಿಧಾನ ಪರಿಷತ್ತಿಗೆ ತಿಳಿಸಿದರು.

ಎಂಪಿಸಿಸಿ ಅಧ್ಯಕ್ಷ ಮಾಣಿಕ್‌ರಾವ್‌ ಠಾಕ್ರೆ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಪೃಥ್ವೀರಾಜ್‌ ಚವಾಣ್‌ ಅವರನ್ನು ಭೇಟಿಯಾಗಿ ಎಲ್‌ಪಿಜಿ ಮೇಲಿನ ತೆರಿಗೆ ಹಿಂದೆಗೆದುಕೊಳ್ಳಲು ಆಗ್ರಹಿಸಿದ್ದರು.

ಜನಸಾಮಾನ್ಯರಿಗೆ ಹೊರೆಯಾಗುವ ಎಲ್‌ಪಿಜಿ ತೆರಿಗೆ ಹಿಂದೆಗೆದುಕೊಳ್ಳಲು ಅನೇಕ ಎನ್‌ಸಿಪಿ ಶಾಸಕರೂ ಒತ್ತಾಯಿಸಿದ್ದರು.

ಎಲ್‌ಪಿಜಿ ಸಿಲಿಂಡರ್‌ ಮೇಲೆ ಶೇ. 5 ವ್ಯಾಟ್‌ ವಿಧಿಸಿದ್ದರಿಂದ ಸಿಲಿಂಡರ್‌ ಬೆಲೆ 20 ರೂ. ದುಬಾರಿಯಾಗಿ ಸರಕಾರಕ್ಕೆ 200-250 ಕೋ.ರೂ. ಕಂದಾಯ ಸಂಪಾದನೆಯ ನಿರೀಕ್ಷೆ ಮಾಡಲಾಗಿತ್ತು.

ತೆರಿಗೆ ಹೆಚ್ಚಳವನ್ನು ವಾಪಸು ತೆಗೆದುಕೊಳ್ಳಲಿದ್ದರಿಂದ ಶಿವಸೇನೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಮುಖ್ಯಮಂತ್ರಿ ಪೃಥ್ವೀರಾಜ್‌ ಚವಾಣ್‌ ಅವರನ್ನು ಭೇಟಿಯಾಗಿ ಪಕ್ಷದ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ