ಮೈಕ್ರೊಸಾಪ್ಟ್‌‌ನ ಸಾರಥಿ ಆಗುವನೇ ಭಾರತೀಯ ?

ಶನಿವಾರ, 30 ನವೆಂಬರ್ 2013 (14:31 IST)
PR
ನ್ಯೂಯಾರ್ಕ್: ವಿಶ್ವದ ಅತಿ ದೊಡ್ಡ ಸಾಪ್ಟ್‌ವೇರ್‌ ಕಂಪೆನಿಯಾದ ಮೈಕ್ರೋಸಾಫ್ಟ್‌ ಕಂಪೆನಿಯ ಸಿಇಒ ಒಬ್ಬ ಭಾರತೀಯ ಆಗುವ ಸಾಧ್ಯತೆಗಳಿವೆ. ಭಾರತದ ಮೂಲದ ಸತ್ಯಾನಡೆಲಾ ಹೆಸರು ಕೇಳಿಬರುತ್ತಿದೆ.ಕಂಪೆನಿ ತನ್ನ ಸಿಇಒ ನೇಮಕ ಮಾಡಿಕೊಳ್ಳಲು ಭಾರತೀಯ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಇವರ ಜೊತೆಗೆ ಫೋರ್ಡ್ ಮೋಟಾರ್‌ ಕಂಪೆನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎಲಾನ್ ಮುಲಾಲಿಯವರ ಹೆಸರು ಕೂಡ ಕೇಳಿಬರುತ್ತಿದೆ.

12 ತಿಂಗಳಲ್ಲಿ ನಿವೃತ್ತಿ ಹೊಂದುವುದಾಗಿ ಮೈಕ್ರೋಸಾಪ್ಟ್‌ನ ಪ್ರಸಕ್ತ ಸಿಇಒ ಸ್ಟಿವ್‌ ಬಾಮರ್‌ ಅಗಸ್ಟ್ ತಿಂಗಳಲ್ಲಿಯೇ ತಿಳಿಸಿದ್ದಾರೆ. ಇದರ ನಂತರ ಕಂಪೆನಿ ಹೊಸ ಸಿಇಒ ಹುಡುಕಾಟ ನಡೆಸಿದೆ. ಸತ್ಯಾ ನಡೆಲ್‌ ಈಗ ಮೈಕ್ರೋ ಸಾಪ್ಟ ಕಂಪೆನಿಯ ಕಾರ್ಯಕಾರಿ ಉಪಾದ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ