ಮೋದಿಯ ನೇರ ನಿಯಂತ್ರಣದಲ್ಲಿ ಯೋಜನಾ ಉಸ್ತುವಾರಿ ಸಮಿತಿ

ಗುರುವಾರ, 18 ಡಿಸೆಂಬರ್ 2014 (19:16 IST)
300 ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ದೇಶದ ಉತ್ಪಾದನೆ ವಲಯದ ಪುನಶ್ಚೇತನದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಯೋಜನಾ ಉಸ್ತುವಾರಿ ಸಮಿತಿಯನ್ನು ತಮ್ಮ ನೇರ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ನರೇಂದ್ರ ಮೋದಿ ಅವರು  6 ತಿಂಗಳಾಗಿದ್ದರೂ ಬಂಡವಾಳ ಹೂಡಿಕೆಗೆ ಉತ್ತೇಜಿಸಿ ಆರ್ಥಿಕತೆಗೆ ಬಲತುಂಬುವ ಮಹತ್ವಾಕಾಂಕ್ಷೆ ಇನ್ನೂ ಈಡೇರಿಸಿಲ್ಲ ಎಂದು ಟೀಕೆ ಎದುರಿಸುತ್ತಿದ್ದಾರೆ. ಮೋದಿ ಮೇಕ್ ಇನ್ ಇಂಡಿಯಾ ಅಭಿಯಾನ ಕೈಗೊಂಡರೂ ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪನ್ನವು ಮೂರು ವರ್ಷಗಳಲ್ಲೇ ಕಳಪೆ ಸಾಧನೆಯಿಂದ ಕೂಡಿದೆ.

ಯೋಜನೆ ಉಸ್ತುವಾರಿ ಗ್ರೂಪ್ ಉಸ್ತುವಾರಿ ವಹಿಸುವ ಮೂಲಕ 180 ಅನುಮತಿಗಳನ್ನು ಪಡೆಯಬೇಕಾದ ಕಲ್ಲಿದ್ದಲು, ವಿದ್ಯುತ್, ಉಕ್ಕು, ಮೂಲಸೌಲಭ್ಯ ಯೋಜನೆಗಳಿಗೆ ಮೋದಿ ನೆರವಾಗಬಹುದು. ಎಲ್ಲಾ ಪ್ರಾಜೆಕ್ಟ್ ಅನುಮತಿಗಳಿಗೆ ಪ್ರಧಾನಮಂತ್ರಿ ಕಚೇರಿ ನೇರವಾಗಿ ಉಸ್ತುವಾರಿ ವಹಿಸುವುದು ಹೆಚ್ಚಿನ ಪ್ರಮಾಣದ ದಕ್ಷತೆ ಮೂಡಿಸುತ್ತದೆ ಮತ್ತು ಪ್ರತಿಯೊಂದು ಮಟ್ಟದಲ್ಲಿ ಅನುಮತಿಗಳು ವೇಗದ ಗತಿಯಲ್ಲಾಗುವ ಖಾತರಿ ನೀಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ವೆಬ್ದುನಿಯಾವನ್ನು ಓದಿ