ಯಮಾಹ , ಟಿವಿಎಸ್‌ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ

ಶನಿವಾರ, 22 ಫೆಬ್ರವರಿ 2014 (16:39 IST)
PR
ನವದೆಹಲಿ : ಕೇಂದ್ರ ಬಜೆಟ್‌‌ನಲ್ಲಿ ಉತ್ಪಾದನಾ ಶುಲ್ಕದಲ್ಲಿ ಕಡಿತ ಮಾಡಿದರಿಂದ ಟಿವಿಎಸ್‌‌ ಮೊಟರ್‌‌ ಕಂಪೆನಿ ತನ್ನ ಬೈಕ್‌‌ಗಳಲ್ಲಿ 3500 ರೂಪಾಯಿವರೆಗೆ ಕಡಿತಗೊಳಿಸಲು ಸಿದ್ದವಾಗಿದೆ. ಉತ್ಪಾದನಾ ಶುಲ್ಕದ ಲಾಭ ಗ್ರಾಹಕರಿಗೆ ದೊರೆಯಬೇಕೆಂಬ ಉದ್ದೇಶದಿಂದ ಕಂಪೆನಿಯ ಬೈಕ್‌‌ಗಳ ದರದಲ್ಲಿ ಇಳಿಕೆ ಮಾಡುತ್ತಿದ್ದೆವೆ. 850 ರೂಪಾಯಿಯಿಂದ 3,500 ರೂಪಾಯಿವರೆಗೆ ಬೈಕ್‌ಗಳ ದರದಲ್ಲಿ ಇಳಿಕೆ ಮಾಡುತ್ತಿದ್ದೆವೆ ಎಂದು ಕಂಪೆನಿಯ ಉಪಾಧ್ಯಕ್ಷ ಶ್ರಿನಿವಾಸನ್‌‌ ತಿಳಿಸಿದ್ದಾರೆ.

ಯಮಹಾ ಮೊಟರ್‌‌ ಇಂಡಿಯಾ ಸೆಲ್ಸ್‌ ಫ್ರೈವೆಟ್‌ ಲಿಮಿಟೆಡ್‌ ತನ್ನ ಬೈಕಗಳ ಬೆಲೆಯಲ್ಲಿ 3000 ರೂಪಾಯಿವರೆಗೆ ಕಡಿತಗೊಳಿಸಲು ಸಿದ್ದವಾಗಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಉತ್ಪಾದನಾ ಶುಲ್ಕದಲ್ಲಿ ಕಡಿತಗೊಳಿಸಿರುವುದು ಸ್ವಾಗತಾರ್ಹ್ ವಿಷಯವಾಗಿದೆ ಮತ್ತು ಇದರ ಲಾಭ ಗ್ರಾಹಕರಿಗೆ ಸಿಗಲು ಕಂಪೆನಿ ತನ್ನ ಎಲ್ಲಾ ವಾಹನಗಳಲ್ಲಿ 3000 ರೂಪಾಯಿಗಳವರೆಗೆ ಕಡಿತಗೊಳಿಸಲಾಗುವುದು ಎಂದು ಕಂಪೆನಿಯ ಉಪಾದ್ಯಕ್ಷ ರಾಯ್‌ ಕುರಿಯನ್‌ ತಿಳಿಸಿದ್ದಾರೆ. ಕಂಪೆನಿ ತನ್ನ ವಾಹನಗಳ ದರದಲ್ಲಿ 1033 ರೂಪಾಯಿಯಿಂದ 3066 ರೂಪಾಯಿವರೆಗೆ ಕಡಿತಗೊಳಿಸಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ