ರಸ್ತೆ ನಿರ್ಮಾಣ ಯೋಜನೆಗೆ ಚಿಂತನೆ

ಶನಿವಾರ, 22 ಸೆಪ್ಟಂಬರ್ 2007 (18:56 IST)
ಭಾರತೀಯ ರಸ್ತೆ ನಿರ್ಮಾಣ ಯೋಜನೆಗಳಿಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆ 88ಶತಕೋಟಿ ಅಮೆರಿಕನ್ ಡಾಲರ್ ಹಣದ ಅಗತ್ಯತೆ ಇದೆ ಎಂದು ವಿಶ್ವ ಬ್ಯಾಂಕ್‌ನ ಸಾರಿಗೆ ವಿಶೇಷಾಧಿಕಾರಿ ರಾಜೇಶ್ ರೋಹತ್ಗಿ ತಿಳಿಸಿದ್ದಾರೆ.

ಸರಕಾರ ಈ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಬೇಕಾದರೆ ವಿಶ್ವಬ್ಯಾಂಕ್ ನೆರವು ಅಗತ್ಯವಾಗಿದ್ದು, ಮುಂದಿನ ಐದು ವರ್ಷಗಳ ಅವಧಿಯ ಯೋಜನೆಯನ್ನು ವಿಶ್ವಬ್ಯಾಂಕ್ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದವರು ನವದೆಹಲಿಯಲ್ಲಿ ಸುದ್ದಿಗಾರರಿಗೆ ವಿವರ ನೀಡಿದರು.

ಈ ಯೋಜನೆಗೆ ವಿಶ್ವಬ್ಯಾಂಕ್ ಈಗಾಗಲೇ 5 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದ್ದು, ಪ್ರಸಕ್ತ ಅವಧಿಯಲ್ಲಿ 1.4ಶತಕೋಟಿ ಅಮೆರಿಕನ್ ಡಾಲರ್ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂದವರು ಹೇಳಿದರು.

12ರಾಜ್ಯ ಹೆದ್ದಾರಿ, ಸುವರ್ಣ ಚತುಸ್ಪದ ಹೆದ್ದಾರಿ ಮತ್ತು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಗೆ ಈಗಾಗಲೇ ವಿಶ್ವಬ್ಯಾಂಕ್ ಅಪಾರ ನಿಧಿಯನ್ನು ಭಾರತ ದೇಶಕ್ಕೆ ನೀಡಿದೆ ಎಂದವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ