ವಜ್ರಾಭರಣ ರಫ್ತು ವಹಿವಾಟಿನಲ್ಲಿ ಶೇ.31ರಷ್ಟು ಹೆಚ್ಚಳ

ಮಂಗಳವಾರ, 23 ನವೆಂಬರ್ 2010 (16:37 IST)
ದೇಶದ ಹರಳು ಮತ್ತು ವಜ್ರಾಭರಣಗಳ ರಫ್ತು ವಹಿವಾಟು, ಅಕ್ಟೋಬರ್ ತಿಂಗಳ ಅವಧಿಯಲ್ಲಿ ಶೇ.31ರಷ್ಟು ಏರಿಕೆ ಕಂಡಿದ್ದು, 12,979,19 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಒಟ್ಟು ರಫ್ತು ವಹಿವಾಟು, 9907.61 ಕೋಟಿ ರೂಪಾಯಿಗಳಿಗೆ ತಲುಪಿತ್ತು ಎಂದು ಜೆಮ್ಸ್ ಆಂಡ್ ಜೆವೆಲ್ಲರಿ ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಷದ ಆರಂಭಿಕ ಹತ್ತು ತಿಂಗಳ ಅವಧಿಯಲ್ಲಿ ರಫ್ತು ವಹಿವಾಟಿನಲ್ಲಿ, ಶೇ.6ರಷ್ಟು ಏರಿಕೆ ಕಂಡು 25,447.74 ಕೋಟಿ ರೂಪಾಯಿಗಳಿಗೆ ತಲುಪಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 24,003.63 ಕೋಟಿ ರೂಪಾಯಿಗಳಾಗಿತ್ತು.

ವೆಬ್ದುನಿಯಾವನ್ನು ಓದಿ