ವೀಸಾ ನಿಯಮ ಉಲ್ಲಂಘನೆ : ಇನ್ಫೋಸಿಸ್‌ಗೆ 35 ಮಿಲಿಯನ್‌ ಡಾಲರ್‌ ದಂಡ

ಮಂಗಳವಾರ, 29 ಅಕ್ಟೋಬರ್ 2013 (17:15 IST)
PTI
PTI
ಭಾರತದ ಪ್ರತಿಷ್ಟಿತ ಸಾಫ್ಟ್‌ವೇರ್‌ ಸಂಸ್ಥೆಯಾಗಿರುವ ಇನ್ಫೋಸಿಸ್‌ಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲು ಅಮೇರಿಕಾ ಚಿಂತನೆ ನಡೆಸುತ್ತಿದೆ. ಅಮೇರಿಕಾದ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಇನ್ಫೋಸಿಸ್‌ ಸಂಸ್ಥೆಗೆ 35 ಮಿಲಿಯನ್‌ ಡಾಲರ್‌ ದಂಡವನ್ನು ವಿಧಿಸಲಾಗುತ್ತಿದೆ ಎಂಬ ಮಾಹಿತಿ ಇದೀಗ ಲಭ್ಯವಾಗುತ್ತಿದೆ.

ಒಟ್ಟಾರೆಯಾಗಿ 35 ಮಿಲಿಯನ್‌ ಡಾಲರ್‌ ದಂಡವನ್ನು ಇನ್ಫೋಸಿಸ್‌ ಸಂಸ್ಥೆಯ ಮೇಲೆ ಅಮೇರಿಕಾ ಸರ್ಕಾರ ವಿಧಿಸಿದೆ. ಅಮೇರಿಕಾದಲ್ಲಿ ಸ್ಥಾಶಪಿಸಲಾಗಿರುವ ಇನ್ಫೋಸಿಸ್‌ ಸಂಸ್ಥೆಯಲ್ಲಿನ ಉದ್ಯೋಗಿಗಳಿಗೆ ಸೂಕ್ತ ನಿಯಮಾವಳಿಗಳನ್ನು ಅನುಸರಿಸದೇ ವೀಸಾ ನಿಯಮಗಳನ್ನು ಉಲ್ಲಂಘಿಸಿ, ವೀಸಾ ಪಡೆದಿರುವುದರಿಂದ ಇನ್ಫೋಸಿಸ್ ಸಂಸ್ಥೆಯ ಮೆಲೆ ಇಷ್ಟೊಂದು ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ