ಶೇ.40 ರಷ್ಟು ತಂದೆತಾಯಿಗಳು ಮಕ್ಕಳಿಂದ ಮೊಬೈಲ್‌ ಗೇಮ್ ಕಲಿಯುತ್ತಾರೆ

ಸೋಮವಾರ, 27 ಜನವರಿ 2014 (16:57 IST)
PR
ಲಂಡನ್‌‌: ಈಗ ನೀವು ನಿಮ್ಮ ಮೊಬೈಲ್‌ನಲ್ಲಿ ಗೇಮ್‌ ಕಲಿಯಲು ಬಯಸುತ್ತಿದ್ದಿರಾ ? ಮತ್ತು ನೀವು ಮೊಬೈಲ್‌ ಮೂಲಕ ಸಾಮಾಜಿಕ ತಾಣಗಳಲ್ಲಿ ಚಾಟ್‌ ಮಾಡಲು ಬಯಸುತ್ತಿದ್ದಿರಾ ? ಹಾಗಾದರೆ ನೀವು ನಿಮ್ಮ ಮಕ್ಕಳಿಂದ ಮೊಬೈಲ್‌ ಗೇಮ ಕಲಿಯಿರಿ. ಇದೇನಿದು ಮೊಬೈಲ್‌‌ ಬಗ್ಗೆ ಮಕ್ಕಳಿಂದ ಕಲಿಯಬೇಕಾ ಎಂದು ಪ್ರಶ್ನಿಸಬಹುದು , ಆದರೆ ವಿಶ್ವದ ಶೇ.40 ರಷ್ಟು ತಂದೆ-ತಾಯಿ ಮತ್ತು ಹಿರಿಯರು ಮಕ್ಕಳಿಂದ ಕಲಿಯುತ್ತಾರೆ ಎಂಬ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ವಿಶ್ವದಲ್ಲಿ ಸಾಕಷ್ಟು ಜನಸಾಮಾನ್ಯರು ಮತ್ತು ಬಡವರು ಇಂಟರ್ನೆಟ್‌‌ ಮತ್ತು ಮೊಬೈಲ್‌ ಬಳಕೆ ಹೇಗೆ ಎಂಬುದು ತಮ್ಮ ಮಕ್ಕಳಿಂದ ಕಲಿಯುವುದು ಹೆಚ್ಚುತ್ತಿದೆ.

ಚಿಲಿಯ ಸೈಟಿಯಾಗೋನ ಸಂಶೋಧಕರು ಈ ವಿಷಯ ಬಹಿರಂಗಗೊಳಿಸಿದೆ. ಇಂಟರ್‌ನೆಟ್‌‌ , ಸೆಲ್‌ಫೊನ್‌ ಮತ್ತು ಸೋಶಿಯಲ್‌‌ ಮೀಡಿಯಾದಲ್ಲಿ ಕಾಲ ಕಳೆಯುವುದಕ್ಕಿಂತ ಮುಂಚೆ ತಮ್ಮ ಮಕ್ಕಳಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚಿಲಿಯಯ ವಿಶ್ವವಿದ್ಯಾಲಯದ ಡಿಗೋ ಪೋರ್ಟಲ್ಸ್‌‌ನ ಟೆರೆಸಾ ಕೋರಿಯಾ ನೇತೃತ್ವದಲ್ಲಿ ನಡೆದ ಸಮೀಕ್ಷೆಯಿಂದ ತಿಳಿದು ಬಂದಿದೆ. ಶೇ014 ರಷ್ಟು ಮಕ್ಕಳು ಮತ್ತು ಶೇ.242 ಪಾಲಕರ ಕುರಿತು ಮಾಡಿದ ಸಮೀಕ್ಷೇಯಿಂದ ಈ ಆಘಾತಕಾರಿ ಸುದ್ದಿ ತಿಳಿದು ಬಂದಿದೆ .

ತಂದೆ ತಾಯಿಯಂದಿರು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿವಂತರ ಪರಿವಾರದಲ್ಲಿ ಈ ತರಹ ಮಕ್ಕಳಿಂದ ಕಲಿಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಟೆರೆಸಾ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ