ಸಂಚಾರಿ ಆರೋಗ್ಯ ಘಟಕ: ರಾನ್‌ಬಾಕ್ಸಿ ಕಂಪೆನಿಯಿಂದ 10ಕೋಟಿ ರೂ. ಕೊಡುಗೆ

ಬುಧವಾರ, 31 ಆಗಸ್ಟ್ 2011 (21:01 IST)
ಜಪಾನ್ ಮೂಲದ ಪ್ರಮುಖ ಔಷಧ ತಯಾರಕ ಕಂಪನಿ ಡೈಇಚಿ ಸಾನ್ಯೋ ಮುಂದಿನ ಐದು ವರ್ಷಗಳವರೆಗೆ ಭಾರತ, ಕೆಮರೂನ್ ಮತ್ತು ತಾಂಜೀನಿಯದ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ಸೇವಾ ಘಟಕ ಸ್ಥಾಪಿಸಲು ಹತ್ತು ಕೋಟಿ ರೂಪಾಯಿ ಕೊಡುಗೆ ನೀಡಲಿರುವುದಾಗಿ ಡೈಇಚಿ ಸಾನ್ಯೋದ ಅಂಗಸಂಸ್ಥೆ ರಾನ್‌ಬಾಕ್ಸಿ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಾಥಮಿಕ ಆರೋಗ್ಯ, ಸಾಂಕ್ರಾಮಿಕ ರೋಗ ನಿಯಂತ್ರಣ, ತಾಯಿ ಮಗುವಿನ ಪೋಷಣೆ ಹಾಗೂ ವಿವಿಧ ಖಾಯಿಲೆಗಳ ಕುರಿತು ಮಾಹಿತಿ ಮತ್ತು ಎಚ್ಚರಿಕೆಯ ಕ್ರಮಗಳನ್ನೂ ಈ ಸಂಚಾರಿ ಆರೋಗ್ಯ ಶಿಬಿರಗಳಲ್ಲಿ ನಡೆಸಿಕೊಡಲಾಗುವುದು ಎಂದು ರಾನ್‌ಬಾಕ್ಸಿ ತಿಳಿಸಿದೆ.

ಭಾರತದಾದ್ಯಂತ ಆರೋಗ್ಯ ಸೇವೆಯನ್ನು ರಾನ್‌ಬಾಕ್ಸಿ ಒದಗಿಸಲಿದ್ದು, ಕೆಮರೂನ್ ಮತ್ತು ತಾಂಜೀನಿಯಾದಲ್ಲಿ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳು ಒದಗಿಸಲಿರುವುದಾಗಿ ಸಂಸ್ಥೆ ತಿಳಿಸಿದೆ.

ಆಫ್ರಿಕಾದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೆಮರೂನ್ ಮತ್ತು ತಾಂಜೀನಿಯಾದಲ್ಲಿ ಸಾಂಕ್ರಾಮಿಕ ರೋಗ ಮತ್ತು ಶಿಶುಮರಣ ಪ್ರಮಾಣ ಅಧಿಕವಾಗಿದ್ದು, ಭಾರತದಲ್ಲೂ ಶಿಶುಮರಣ ಪ್ರಮಾಣ ಅತ್ಯಧಿಕವಾಗಿದೆ ಎಂದು ರಾನ್‌ಬಾಕ್ಸಿ ತಿಳಿಸಿದೆ.

ಈ ಯೋಜನೆಯ ಅನುಷ್ಠಾನದಿಂದ ಮೂರು ದೇಶಗಳಲ್ಲಿ ರೋಗರುಜಿನಗಳಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಯಾಗಲಿದೆ ಎಂದು ಖ್ಯಾತ ಔಷಧಿ ತಯಾರಕ ಸಂಸ್ಥೆ ರಾನ್‌ಬಾಕ್ಸಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ