ಸೂಚ್ಯಂಕದಲ್ಲಿ ಭಾರಿ ಏರಿಕೆ

ಸೋಮವಾರ, 29 ಅಕ್ಟೋಬರ್ 2007 (11:58 IST)
ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗೆ ಪ್ರತಿಕ್ರಿಯಿಸಿರುವ ಮುಂಬೈ ಶೇರು ಸೂಚ್ಯಂಕವು ಸೋಮವಾರದ ಪ್ರಾರಂಭಿಕ ವಹಿವಾಟಿನಲ್ಲಿ 616 ಅಂಶಗಳ ಏರಿಕೆ ಕಂಡು, ಸಂವೇದಿ ಸೂಚ್ಯಂಕವು 20 ಸಾವಿರದ ಗಡಿಯನ್ನು ದಾಟಿತು.

ಇಂದಿನ ಭಾರಿ ಪ್ರಮಾಣದ ವಹಿವಾಟಿಗೆ ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕಿನ ಸಭೆಯ ನಿಗದಿ ಮತ್ತು ಇದಕ್ಕೂ ಮುನ್ನ ಮ್ಯುಚುವಲ್ ಫಂಡ್ ಕಂಪನಿಗಳು ಶೇರು ಖರೀದಿಗೆ ಮುಂದಾಗಿದ್ದು ಕಾರಣ.

ಬಿಎಸ್ಇ-30 ಸೂಚ್ಯಂಕ ಪಟ್ಟಿಯು ದಿನದ ಪ್ರಾರಂಭಿಕ ಐದು ನಿಮಿಷಗಳ ವಹಿವಾಟಿನಲ್ಲಿ 616.30 ಅಂಶಗಳ ಏರಿಕೆಯೊಂದಿಗೆ 19,859.47 ಅಂಶಗಳ ಗಡಿಯನ್ನು ತಲುಪಿತು. ಇದೇ ರೀತಿ ರಾಷ್ಟ್ರೀಯ ಶೇರು ಸೂಚ್ಯಂಕವು ವಾರದ ಮೊದಲ ದಿನದ, ಪ್ರಾರಂಭಿಕ ವಹಿವಾಟಿನಲ್ಲಿ 168.40 ಅಂಶಗಳ ಗಳಿಕೆಯೊಂದಿಗೆ 5870.70ರ ಸಂವೇದಿ ಸೂಚ್ಯಂಕವು ತಲುಪಿ ದಾಖಲೆ ನಿರ್ಮಿಸಿತು.

ವೆಬ್ದುನಿಯಾವನ್ನು ಓದಿ