ಹಸನ್ ಅಲಿ ವಂಚಿಸಿದ ತೆರಿಗೆ ಮೊತ್ತ ಕೇವಲ 72000 ಕೋಟಿ ರೂ.

ಗುರುವಾರ, 10 ಮಾರ್ಚ್ 2011 (10:05 IST)
PTI
ದೇಶದ ನಂಬರ್ ಒನ್ ತೆರಿಗೆ ವಂಚಕ ಹಸನ್ ಅಲಿ ಖಾನ್ ಹಾಗೂ ಸಹಚರರು, ಪ್ರಸ್ತುತ 40,000 ಕೋಟಿರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲ ತೆರಿಗೆ ಅಧಿಕಾರಿಗಳ ವಿಚಾರಣೆಯಿಂದಾಗಿ ತೆರಿಗೆ ವಂಚನೆ ಮೊತ್ತ 72000 ಕೋಟಿ ರೂಪಾಯಿಗಳಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.

ದೇಶದ ಆರೋಗ್ಯ ಬಜೆಟ್‌ಗಿಂತ ಹಸನ್ ಅಲಿಖಾನ್ ತೆರಿಗೆ ವಂಚನೆ ಹೆಚ್ಚಾಗಿದೆ. ಹಸನ್ ಅಲಿ ಖಾನ್ 50,329 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದು, ಆತನ ಪತ್ನಿ ರೀಮಾ ಖಾನ್ 49 ಕೋಟಿ ರೂಪಾಯಿ ಹಾಗೂ ಖಾನ್ ಸಹಚರ ಕಾಶೀನಾಥ್ ತುಪುರಯ್ಯ ಮತ್ತು ಆತನ ಪತ್ನಿ ಚಂದ್ರಿಕಾ ತಪುರಯ್ಯ 20,540 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಹಸನ್ ಅಲಿ ಖಾನ್ ಹಾಗೂ ಸಹಚರರು ದೇಶಕ್ಕೆ ಒಟ್ಟು 71,845 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ.ಆದಾಯ ತೆರಿಗೆ ಇಲಾಖೆ ಖಾನ್ ಮತ್ತು ಕಾಶೀನಾಥ್ ಅವರ ನಿವಾಸಗಳ ಮೇಲೆ ನಡೆಸಿದ ದಾಳಿಯಲ್ಲಿ ಕೇವಲ 60 ಲಕ್ಷ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2007ರಿಂದ ಆದಾಯ ತೆರಿಗೆ ಇಲಾಖೆಗೆ ಹಸನ್ ಅಲಿ ಖಾನ್ ತೆರಿಗೆ ವಂಚನೆಯ ಮಾಹಿತಿಯಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ ಆದಾಯ ತೆರಿಗೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಖಾನ್ ಹಾಗೂ ಅವರ ಪತ್ನಿ ಮತ್ತು ಸಹಚರರು 71,848.59 ಕೋಟಿ ರೂಪಾಯಿಗಳ ತೆರಿಗೆಯನ್ನು ವಂಚಿಸಿದ್ದಾರೆ ಎಂದು 2009ರ ಅವಧಿಯಲ್ಲಿ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು.

ಹಸನ್ ಅಲಿ ಖಾನ್ ಮತ್ತು ಸಹಚರ ಕಾಶೀನಾಥ್ ತಪುರಯ್ಯ ನಿವಾಸದ ಮೇಲೆ ದಾಳಿ ನಡೆಸಿದಾಗ, ವಶಪಡಿಸಿಕೊಂಡ ಪೆನ್‌ಡ್ರೈವ್ ಮತ್ತು ಲ್ಯಾಪ್‌ಟಾಪ್‌ಗಳಿಂದ 71,848.59 ಕೋಟಿ ರೂಪಾಯಿಗಳ ತೆರಿಗೆ ವಂಚನೆ ಪತ್ತೆಯಾಗಿದೆ ಎಂದು ಇದೀಗ ಆದಾಯ ತೆರಿಗೆ ಅಧಿಕಾರಿಗಳ ಹೇಳಿಕೆ ಅಚ್ಚರಿ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ