ಹಿಂದೂಸ್ತಾನ್ ಲಿವರ್ ಬದಲಾವಣೆ

ಇಳಯರಾಜ

ಸೋಮವಾರ, 25 ಜೂನ್ 2007 (13:17 IST)
WD
ಬಹು ಬೇಡಿಕೆಯ ಗ್ರಾಹಕ ವಸ್ತುಗಳ ಉತ್ಪಾದಕ ಕಂಪನಿ ಹಿಂದೂ ಸ್ಥಾನ್ ಲಿವರ್ ತನ್ನ ಹೆಸರನ್ನು 'ಹಿಂದೂಸ್ಥಾನ್ ಯುನಿಲಿವರ್'ಎಂಬುದಾಗಿ ತನ್ನ ಹೆಸರನ್ನು ಬದಲಿಸಿದ್ದು, ಸರ್ಕಾರಿ ಅನುಮೋದನೆ ಲಭಿಸಿದೆ.

ಲಿವರ್ ತನ್ನ ಹೆಸರು, ವಾಣಿಜ್ಯಿಕ ಲಾಂಛನ(ಲೋಗೊ)ಗಳನ್ನು ಬದಲಿಸಿದೆ,ಇಂದಿನಿಂದಲೇ ಅನುಷ್ಠಾನಕ್ಕೆ ಬರಲಿದೆ. ಸಂಸ್ಥೆಯ ಹೊಸ ಹೆಸರು ಕಂಪನಿಯ ಎಲ್ಲಾ ಉತ್ಪಾದಕ ಕ್ಷೇತ್ರಗಳಲ್ಲೂ ಗುರುತಿಸಲ್ಪಡುವಂತಿದೆ.

ಹಿಂದೂ ಸ್ಥಾನ್ ಯುನಿಲಿವರ್‌ ಎಂಬ ಹೊಸ ಕಾರ್ಪೊರೇಟ್ ಗುರುತು ಲಾಂಛನಗಳು ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಸಂಕೇತಿಸಲಿದೆ.

ಇದು ವ್ಯವಹಾರ ರಂಗದ ಎಲ್ಲಾ ವಿಭಾಗಗಳಲ್ಲಿ ನಮ್ಮ ಸ್ಥಾನಗಳನ್ನು ಗುರುತಿಸಲು ನೆರವಾಗಲಿದೆ ಎಂಬುದಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೋಗ್ ಬೈಲಿ ತಿಳಿಸಿದ್ದಾರೆ.

ಕಂಪನಿಯ ಹೊಸ ಲಾಂಛನವು ಸಂಸ್ಥೆಯ ಘೋಷಣೆಯಾದ ಬದುಕಿನ ಸಾಮರ್ಥ್ಯ ವೃದ್ಧಿ ಎಂಬುದಕ್ಕೆ ಪೂರಕವಾಗಿರುತ್ತದೆ.ಇದರಲ್ಲಿ ವಿವಿಧ ಸಹ ಸಂಘಟನೆಗಳ 25 ಗುರುತುಗಳನ್ನು ಹೊಂದಿರುತ್ತದೆ.

ಹಿಂದೂಸ್ತಾನ್ ಲಿವರ್ ಕಂಪನಿಯ ಷೇರುದಾರರು ಮೇ 18ರಂದು ಜರುಗಿದ ಸಭೆಯಲ್ಲಿ ಹೊಸ ಬದಲಾವಣೆಗೆ ತಮ್ಮ ಒಪ್ಪಿಗೆ ನೀಡಿದ್ದಾರೆ.ಆಂಗ್ಲೋ-ಡಚ್ ಮಾಲಕತ್ವದ ಯುನಿಲಿವರ್ ಸಂಸ್ಥೆ 1931ರಿಂದ ಹಿಂದೂಸ್ತಾನ್ ಲಿವರ್‌ನ ಮಾಲಿಕತ್ವ ಹೊಂದಿದೆ.

ವೆಬ್ದುನಿಯಾವನ್ನು ಓದಿ