92 ಕಲ್ಲಿದ್ದಲು ನಿಕ್ಷೇಪಗಳ ಹರಾಜಿನಿಂದ 1.47 ಕೋಟಿ ಆದಾಯ

ಬುಧವಾರ, 24 ಡಿಸೆಂಬರ್ 2014 (18:12 IST)
92 ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಮತ್ತು ಹರಾಜಿನಿಂದ ಸರ್ಕಾರ 1.47 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿದೆ. ಇವುಗಳನ್ನು ಮೊದಲ ಹಂತದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಿಗೆ ನೀಡಲಾಗಿತ್ತು.

92 ಕಲ್ಲಿದ್ದಲು ಬ್ಲಾಕ್‌ಗಳುಪ 18, 446 ದಶಲಕ್ಷ ಟನ್ ಬೌಗೋಳಿಕ ನಿಕ್ಷೇಪ ಹೊಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 92 ಕಲ್ಲಿದ್ದಲು ಬ್ಲಾಕ್‌ಗಳ ಪೈಕಿ 57 ಬ್ಲಾಕ್‌ಗಳು ವಿದ್ಯುತ್ ಕ್ಷೇತ್ರಕ್ಕೆ ಮತ್ತು 35 ಗಣಿಗಳು ವಿದ್ಯುದೇತರ ಕ್ಷೇತ್ರಕ್ಕೆ ಎಂದು ಮೂಲಗಳು ಹೇಳಿವೆ.

ವಿದ್ಯುತ್ ಕ್ಷೇತ್ರಕ್ಕೆ ಬ್ಲಾಕ್‌ಗಳು 15, 305 ಟನ್ ಬೌಗೋಳಿಕ ನಿಕ್ಷೇಪಗಳನ್ನು ಹೊಂದಿದ್ದು,ಇವುಗಳಿಂದ ಆದಾಯ ಪ್ರತಿ ಟನ್‌ಗೆ 100 ರೂ. ಮೂಲದರದಿಂದ 1.53 ಲಕ್ಷ ಕೋಟಿಗಳಾಗುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ