2ಜಿ, 3ಜಿ ತರಂಗಾಂತರದ ಅತೀ ದೊಡ್ಡ ಹರಾಜಿನಲ್ಲಿ 1 ಲಕ್ಷ ಕೋಟಿ ರೂ. ನಿರೀಕ್ಷೆ

ಬುಧವಾರ, 4 ಮಾರ್ಚ್ 2015 (12:25 IST)
2ಜಿ ಮತ್ತು 3 ಜಿ ತರಂಗಾಂತರದ ಅತೀ ದೊಡ್ಡ ಹರಾಜು ಇಂದು ಆರಂಭವಾಗಿದ್ದು, ಮೀಸಲು ದರದ ಆಧಾರದ ಮೇಲೆ ಸರ್ಕಾರಕ್ಕೆ ಇದರಿಂದ 82,000 ಕೋಟಿ ರೂ. ಲಭಿಸುವುದೆಂದು ನಿರೀಕ್ಷಿಸಲಾಗಿದೆ.ಮೊಬೈಲ್ ಫೋನ್‌ಗೆ ಬಳಸುವ ರೇಡಿಯೋ ತರಂಗಾಂತರ ಮಾರಾಟದಿಂದ ಒಂದು ಲಕ್ಷ ಕೋಟಿ ರೂ. ಸಿಗಬಹುದೆಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಏರ್‌ಟೆಲ್, ವೊಡಾಫೋನ್, ಐಡಿಯಾ ಸೆಲ್ಯೂಲರ್ ಮತ್ತು ರಿಲಯನ್ಸ್ ಟೆಲಿಕಾಂ ಪ್ರಸಕ್ತ ಹೊಂದಿರುವ ಬಹುತೇಕ ತರಂಗಾಂತರಗಳನ್ನು ಹರಾಜು ಹಾಕಲಾಗುತ್ತಿದೆ. ಇವುಗಳ ಪರವಾನಗಿ 2015-16ರಲ್ಲಿ ಮುಗಿಯಲಿದ್ದು, ನವೀಕರಣವಾಗಬೇಕಿದೆ.

ಇದರಿಂದ ಈ ಕಂಪನಿಗಳು ತರಂಗಾಂತರಕ್ಕೆ ಪುನಃ ಬಿಡ್ ಮಾಡುವ ಮೂಲಕ ಸೇವೆಯನ್ನು ಮುಂದುವರಿಸಬಹುದಾಗಿದೆ.ಕಳೆದ ಫೆ. 2014ರಲ್ಲಿ ಸರ್ಕಾರ ತರಂಗಾಂತರ ಹರಾಜಿನಲ್ಲಿ 62,162 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಎರಡನೇ ಸುತ್ತಿನ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಕೂಡ ಇಂದು ಆರಂಭವಾಗಿದೆ. ಕಲ್ಲಿದ್ದಲು ಹರಾಜಿನ ಮೊದಲ ಸುತ್ತಿನಲ್ಲಿ 1 ಲಕ್ಷ ಕೋಟಿ ರೂ. ಲಭಿಸಿತ್ತು. ಎರಡನೇ ಸುತ್ತಿನಲ್ಲಿ 15 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕಲಾಗುತ್ತದೆ.

ವೆಬ್ದುನಿಯಾವನ್ನು ಓದಿ