100 ಬಜೆಟ್ ಹೋಟೆಲ್‌ಗಳ ನಿರ್ಮಾಣ

ಶುಕ್ರವಾರ, 23 ನವೆಂಬರ್ 2007 (18:35 IST)
ರೈಲ್ವೆ ಇಲಾಖೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದ 100 ಬಜೆಟ್‌ ಹೋಟೆಲ್‌ಗಳ ನಿರ್ಮಾಣಕ್ಕಾಗಿ ಯೋಜನೆಯನ್ನು ಸಿದ್ದಪಡಿಸಿದೆ ಎಂದು ಇಲಾಖೆಯ ರಾಜ್ಯಸಚಿವ ಆರ್ ವೇಲು ರಾಜ್ಯಸಭೆಗೆ ತಿಳಿಸಿದ್ದಾರೆ.

ದಿನನಿತ್ಯದ ಅವಶ್ಯಕ ವಸ್ತುಗಳ ಸರಕು ಸಾಗಾಣೆ ರೈಲುಗಳ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವೇಲು ತಿಳಿಸಿದ್ದಾರೆ.

ಜನೆವರಿಯಿಂದ ಸೆಪ್ಟೆಂಬರ್‌ವರೆಗೆ ಟಿಕೆಟ್ ಪಡೆಯದೇ ರೈಲುಗಳಲ್ಲಿ ಪ್ರಯಾಣಿಸುತ್ತಿರುವ 47.78 ಲಕ್ಷ ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದು 174.35 ಕೋಟಿರೂ.ಗಳ ದಂಡವನ್ನು ವಸೂಲಿ ಮಾಡಿ ರೈಲ್ವೆ ಇಲಾಖೆ ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ