7ನೇ ವೇತನ ಆಯೋಗ ಜಾರಿ: ಸರಕಾರಿ ನೌಕರರ ವೇತನದಲ್ಲಿ ಶೇ.20 ರಷ್ಟು ಹೆಚ್ಚಳ ಸಾಧ್ಯತೆ

ಮಂಗಳವಾರ, 28 ಜೂನ್ 2016 (19:34 IST)
ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ನೇತೃತ್ವದ ಸಮಿತಿ ಏಳನೇ ವೇತನ ಆಯೋಗ ಜಾರಿ ಕುರಿತಂತೆ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ವರದಿ ನೀಡಿದ ನಂತರ, ಕೇಂದ್ರ ಏಳನೇ ವೇತನ ಆಯೋಗ ಜಾರಿಗೊಳಿಸುವ ಸಾಧ್ಯತೆಗಳಿವೆ. 
 
ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ವೇತನ ಆಯೋಗದ ಶಿಫಾರಸ್ಸು ವರದಿಯನ್ನು ಅಂತಿಮಗೊಳಿಸಲಾಗಿದ್ದು, ನಾವು ಶೀಘ್ರದಲ್ಲಿಯೇ ವರದಿ ಆಧರಿಸಿ ಸಂಪುಟಕ್ಕೆ ಕರಡು ಟಿಪ್ಪಣಿಯನ್ನು ಹೊರಡಿಸುತ್ತೇವೆ ಎಂದು ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಾಸಾ ಹೇಳಿದ್ದಾರೆ. ಮುಂದಿನ ವಾರದಲ್ಲಿ ಸಮಿತಿ ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ಸಂಸತ್ತಿನ ಚರ್ಚೆ ಆರಂಭವಾಗಲಿದೆ ಎನ್ನಲಾಗಿದೆ.
 
ಏಳನೇ ವೇತನ ಆಯೋಗದ ಶಿಫಾರಸ್ಸನ್ನು ಶೀಘ್ರದಲ್ಲಿಯೇ ಘೋಷಿಸಲಾಗುತ್ತದೆ. ಸರಕಾರಿ ಉದ್ಯೋಗಿಗಳ ವೇತನದಲ್ಲಿ  ಶೇ.20 ಕ್ಕಿಂತ ಕಡಿಮೆ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ. ಏಳನೇ ವೇತನ ಆಯೋಗ ಜಾರಿಗೊಳಿಸಲು ಅಗತ್ಯವಾದ ಕ್ರಮಗಳ ಬಗ್ಗೆ 2016-2017 ರ ಬಜೆಟ್ ಮಂಡನೆ ಸಂದರ್ಭದಲ್ಲಿ ಬದಲಾವಣೆ ತರಲಾಗುವುದು ಎಂದು ಲಾವಾಸಾ ತಿಳಿಸಿದ್ದಾರೆ. 
 
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವು ಸರಕಾರಿ ನೌಕರರ ವೇತನ ಮತ್ತು ತುಟ್ಟಿಭತ್ತೆಯನ್ನು 23.55 ಪ್ರತಿಶತಕ್ಕೆ ಮತ್ತು ಪಿಂಚಣಿಯನ್ನು 24 ಪ್ರತಿಶತಕ್ಕೆ ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಿತ್ತು.

ವೆಬ್ದುನಿಯಾವನ್ನು ಓದಿ