2008-09ರಲ್ಲಿ ಆರ್ಥಿಕಸ್ಥಿತಿ ಸದೃಢ; ವಿತ್ತ ಸಚಿವಾಲಯ

ಶನಿವಾರ, 22 ನವೆಂಬರ್ 2008 (11:43 IST)
ಜಾಗತಿಕ ಆರ್ಥಿಕ ಕುಸಿತ ಹಾಗೂ ಇನ್ನಿತರ ಅಂಶಗಳು ದೇಶದ ಹಲವು ಕ್ಷೇತ್ರಗಳ ಆರ್ಥಿಕ ಬಿಕ್ಕಟ್ಟಿನ ಮೇಲೆ ಪ್ರಭಾವ ಬೀರಿದ್ದರೂ ದೇಶದ ಅಭಿವೃದ್ಧಿ ದರ ಶೇ.7-8 ರಷ್ಟು ದಾಖಲಿಸಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಕ್ಷೇತ್ರ ಜಾಗತಿಕ ಆರ್ಥಿಕ ಕುಸಿತದಿಂದ ಹೊರತಾಗಿದ್ದು, ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದಿಂದಾಗಿ ವಿದ್ಯುತ್ ಕ್ಷೇತ್ರದಲ್ಲಿ ಸಕಾರಾತ್ಮಕ ಅಂಶಗಳನ್ನು ನೋಡಬಹುದಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ 15 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳು ಆರ್ಥಿಕ ಕುಸಿತದಿಂದ ತೊಂದರೆಗೊಳಗಾಗಿವೆ. ಕೃಷಿ ಮತ್ತು ವಿದ್ಯುತ್‌ ಸೇರಿದಂತೆ 4 ಕ್ಷೇತ್ರಗಳು ತಟಸ್ಥವಾಗಿದ್ದು ಆರ್ಥಿಕ ಕುಸಿತದಿಂದ ಯಾವುದೇ ಪರಿಣಾಮವಾಗಿಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿ ದರ ಜಾಗತಿಕ ಆರ್ಥಿಕ ಕುಸಿತದಲ್ಲಿ ಕೂಡಾ ಸದೃಢವಾಗಿದೆ. ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.7 ರಿಂದ ಶೇ.8ರ ವರೆಗೆ ತಲುಪಲಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ