2012ರಲ್ಲಿ ಭಾರತ 3ನೇ ಬೃಹತ್ ಆರ್ಥಿಕ ರಾಷ್ಟ್ರ

ಶನಿವಾರ, 23 ಜನವರಿ 2010 (12:27 IST)
ಆಮೆರಿಕದ ಬೃಹತ್ ಆರ್ಥಿಕ ಸಂಸ್ಥೆಗಳ ಕುಸಿತದಿಂದಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶವಿದೆ.ಮುಂಬರುವ 2012ರ ವೇಳೆಗೆ ಭಾರತ ಆರ್ಥಿಕತೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ಭಾರತ ಜಗತ್ತಿನ ಮೂರನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಜಾಗತಿಕ ಮಟ್ಟದ ಲೆಕ್ಕಪರಿಶೋಧಕ ಸಂಸ್ಥೆ ಪ್ರೈಸ್‌ವಾಟರ್‌ಹೌಸ್ ಕೂಪರ್ಸ್(ಪಿಡಬ್ಲೂಸಿ) ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಜಾಗತಿಕ ಮಟ್ಟದ ಹೂಡಿಕೆದಾರ ಸಂಸ್ಥೆಯಾದ ಗೋಲ್ಡ್‌ಮ್ಯಾನ್ ಸ್ಯಾಚೆಟ್‌ ಕೂಡಾ ಅದೇ ರೀತಿಯ ಭವಿಷ್ಯದ ಹೇಳಿಕೆ ನೀಡಿದ್ದು,ಜಪಾನ್ 2032ರಲ್ಲಿ ಭಾರತ ಆರ್ಥಿಕತೆಯಲ್ಲಿ ಜಪಾನ್ ದೇಶವನ್ನು ಹಿಂದೆ ಹಾಕಲಿದೆ ಎಂದು ಹೇಳಿಕೆ ನೀಡಿದೆ.

ಪಿಡಬ್ಲೂಸಿ ಪ್ರಕಾರ, ಮುಂಬರುವ 2020ರ ವೇಳೆಗೆ ಚೀನಾ ಜಗತ್ತಿನ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಾದ ಚೀನಾ ಮತ್ತು ಭಾರತ ಜಾಗತಿಕ ಆರ್ಥಿಕ ಕುಸಿತದ ಪ್ರಭಾವಕ್ಕೆ ಒಳಗಾಗಿದ್ದು, ನಂತರ 2009ರಲ್ಲಿ ಭಾರತ ಮತ್ತು ಚೀನಾ ಆರ್ಥಿಕತೆಯಲ್ಲಿ ಗರಿಷ್ಠ ಆರ್ಥಿಕ ವೃದ್ಧಿದರದಲ್ಲಿ ಸುಧಾರಣೆ ಕಂಡಿವೆ. ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳು ನಿಧಾನ ಆರ್ಥಿಕತೆ ವೇಗ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿವೆ.

ಭಾರತದ ಆರ್ಥಿಕತೆ 2009-10ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.9ಕ್ಕೆ ತಲುಪಿತ್ತು. ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಜಿಡಿಪಿ ದರ ಶೇ.7ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ನಿರೀಕ್ಷೆ ವ್ಯಕ್ತಪಡಿಸಿದೆ. ಮುಂಬರುವ ಎರಡು-ಮೂರು ವರ್ಷಗಳಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ