3ನೇ ತ್ರೈಮಾಸಿಕದಲ್ಲಿ ಅಮೆರಿಕ ಆರ್ಥಿಕತೆ ಶೇ. 2.5 ಪ್ರಗತಿ

ಶನಿವಾರ, 29 ಅಕ್ಟೋಬರ್ 2011 (15:09 IST)
ಆರ್ಥಿಕ ಕುಸಿತದ ಭೀತಿ ಎದುರಿಸುತ್ತಿರುವ ಅಮೆರಿಕದ ಆರ್ಥಿಕತೆ ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ಇಲ್ಲಿನ ವಾಣಿಜ್ಯ ಇಲಾಖೆ ವರದಿ ಪ್ರಕಟಿಸಿದೆ. ಗ್ರಾಹಕರು ಹೆಚ್ಚೆಚ್ಚು ಖರ್ಚು ಮಾಡುತ್ತಿರುವುದು ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಭಾರೀ ಹೂಡಿಕೆ ಮಾಡುತ್ತಿರುವುದರಿಂದ ಪ್ರಸಕ್ತ ವರ್ಷದ ಆರಂಭಿಕ ಅರ್ಧವಾರ್ಷಿಕಕ್ಕಿಂತ ದ್ವಿತೀಯ ಅವಧಿಯಲ್ಲಿ ಹೆಚ್ಚು ಪ್ರಗತಿ ಕಾಣುತ್ತಿರುವುದಾಗಿ ಗುರುವಾರ ವರದಿ ಪ್ರಕಟಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ಅವಧಿಗೆ ಶೇಕಡಾ 1.3 ರಷ್ಟಿದ್ದ ಪ್ರಗತಿ ದರ ಜುಲೈ-ಸೆಪ್ಟೆಂಬರ್ ಅವಧಿಗೆ ಶೇ. 2.5 ಕ್ಕೇರುವುದರೊಂದಿಗೆ ಚೇತರಿಕೆ ಕಂಡಿದೆ. ಹಾಗೂ ಆರಂಭಿಕ ಆರು ತಿಂಗಳಿಗೆ ಹೋಲಿಸಿದರೆ ಅಮೆರಿಕದ ಒಟ್ಟಾರೆ ಅಭಿವೃದ್ದಿ ಶೇಕಡಾ 0.9 ರಷ್ಟು ಪ್ರಗತಿ ಸಾಧಿಸಿರುವುದಾಗಿ ಇಲಾಖೆಯ ವರದಿ ತಿಳಿಸಿದೆ.

ಪ್ರಸ್ತುತ ಸಾಧಿಸಿರುವ ಪ್ರಗತಿಯು ಆರ್ಥಿಕ ಹಿಂಜರಿತದ ಭೀತಿಯಿಂದ ಸಮಾಧಾನ ತರಿಸುವಂತಿದ್ದು, ಅಮೆರಿಕ ಆರ್ಥಿಕತೆಯನ್ನು ಸಂಕಷ್ಟಕ್ಕೀಡು ಮಾಡಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಮತ್ತಷ್ಟು ಪ್ರಗತಿಯ ಅವಶ್ಯಕತೆಯಿದೆ.

ವೆಬ್ದುನಿಯಾವನ್ನು ಓದಿ