4 ದಿನದಲ್ಲಿ 150 ಕೋಟಿ ಬಾಚಿಕೊಂಡ ಈರುಳ್ಳಿ ವ್ಯಾಪಾರಿಗಳು

ಶನಿವಾರ, 24 ಆಗಸ್ಟ್ 2013 (14:12 IST)
WD
WD
ರೈತರು ಮತ್ತು ದಲ್ಲಾಳಿಗಳ ಪಾಲಿಗೆ ಇದೀಗ ಈರುಳ್ಳಿಯೇ ಭಾಗ್ಯದ ಲಕ್ಷ್ಮಿಯಾಗಿದ್ದಾಳೆ. ಯಾಕೆಂದ್ರೆ ಕೇವಲ ನಾಲ್ಕೇ ದಿನಗಳಲ್ಲಿ 150 ಕೋಟಿ ಲಾಭ ಮಾಡಿಕೊಂಡಿದ್ದಾರೆ ಈರುಳ್ಳಿ ಮಾರಾಟಗಾರರು..!

ಆಗಸ್ಟ್‌ 12 ರಿಂದ 15 ರವರೆಗೆ ಸುಮಾರು ಐದು ಲಕ್ಷ ಕ್ವಿಂಟಾಲ್‌ ಈರುಳ್ಳಿ ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದಕ್ಕಿಂತ ಮೊದಲು ಕ್ವಿಂಟಾಲಿಗೆ 1500 ರೂಪಾಯಿಯಂತೆ ರೈತರಿಂದ ದಲ್ಲಾಳಿಗಳು ಖರೀದಿ ಮಾಡಿ ತಂದಿದ್ದರು. ಆದರೆ ಆಗಸ್ಟ್ 12 ಕ್ಕಿಂತ ಮೊದಲು 12 ರೂಪಾಯಿ ಕಿಲೋ ಇದ್ದ ಈರುಳ್ಳಿ ಬೆಲೆ ಆಗಸ್ಟ್‌ 12 ರ ನಂತರದಲ್ಲಿ ಏಕಾಏಕಿ 80 ರೂಪಾಯಿಗಳಿಗೆ ಏರಿತು. ಇದು ದಲ್ಲಾಳಿಗಳಿಗೆ ಮತ್ತು ಸ್ಟಾಕ್‌ ಮಾರ್ಕೆಟಿನವರಿಗೆ ವರದಾನವಾಗಿ ಮಾರ್ಪಟ್ಟಿತು. ಕೇವಲ ನಾಲ್ಕು ದಿನಗಳಲ್ಲಿಯೇ 150 ಕೋಟಿ ರೂಪಾಯಿಗಳ ವ್ಯಾಪಾರು ವಹಿವಾಟು ನಡೆಸಿದ್ದರು ಈರುಳ್ಳಿ ವ್ಯಾಪಾರಿಗಳು

ಆರಂಭದಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದ ಮಧ್ಯವರ್ತಿಗಳು ಮಾತ್ರವೇ ಹೆಚ್ಚಿನ ಲಾಭವನ್ನು ಮಾಡಿಕೊಂಡಿದ್ದರು. ಆದರೆ ಬೆಲೆ ಏರಿಕೆಯ ಪರಿಣಾಮವನ್ನು ಅರಿತ ರೈತರು ನಂತರದಲ್ಲಿ 1500 ರೂಪಾಯಿಗೆ ಬದಲಾಗಿ 4500 ರೂಪಾಯಿಗೆ ಕ್ವಿಂಟಾಲ್ ನಂತೆ ಈರುಳ್ಳಿಯನ್ನು ಮಾರಾಟ ಮಾಡಿದರು. ಒಟ್ಟಾರೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ ಕೋಟಿ ಕೋಟಿ ಗಳಿಸಿಕೊಟ್ಟ ಈರುಳ್ಳಿ ಮಾರಾಟಗಾರರ ಪಾಲಿಗೆ ಭಾಗ್ಯಲಕ್ಷ್ಮಿಯಾಗಿ ಮಾರ್ಪಟ್ಟಿದೆ. ಆದರೆ ಈರುಳ್ಳಿ ಕೊಳ್ಳುವವರ ಪಾಲಿಗೆ ಕಣ್ಣೀರಿನ ಕಥೆಯಾಗಿ ಉಳಿದುಬಿಟ್ಟಿದೆ.

ವೆಬ್ದುನಿಯಾವನ್ನು ಓದಿ