2015ರಲ್ಲಿ ಐವರು ನೌಕರರಲ್ಲಿ ನಾಲ್ವರು ಉದ್ಯೋಗ ಬದಲಾವಣೆಗೆ ಇಚ್ಛೆ

ಶುಕ್ರವಾರ, 19 ಡಿಸೆಂಬರ್ 2014 (14:07 IST)
ಪ್ರತಿಭಾ ಪಲಾಯನವನ್ನು ತಪ್ಪಿಸಲು ಸಂಸ್ಥೆಗಳು ಆಂತರಿಕವಾಗಿ ವೃತ್ತಿಜೀವನ ಬೆಳವಣಿಗೆ ಆಯ್ಕೆಗಳನ್ನು ಸುಧಾರಿಸಬೇಕಾಗಿದೆ. ಏಕೆಂದರೆ 2015ರಲ್ಲಿ 5 ನೌಕರರ ಪೈಕಿ ನಾಲ್ವರು ನೌಕರರು ಹೊಸ ಉದ್ಯೋಗಾವಕಾಶಗಳಿಗೆ ಯೋಜಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮುಂಬರುವ ವರ್ಷದಲ್ಲಿ, ಶೇ. 80ರಷ್ಟು ಉತ್ತರ ಅಮೆರಿಕ ನೌಕರರು ಹೊಸ ಉದ್ಯೋಗಾವಕಾಶಗಳ ಶೋಧನೆಯಲ್ಲಿದ್ದಾರೆ ಎಂದು ರೈಟ್ ಮ್ಯಾನೇಜ್‌ಮೆಂಟ್ ಸಮೀಕ್ಷೆಯೊಂದು ತಿಳಿಸಿದೆ.  ಈ ವರದಿಯ ಫಲಿತಾಂಶಗಳ ಪ್ರಕಾರ, ಕಾರ್ಮಿಕಬಲವು ತಮ್ಮ ವೃತ್ತಿಜೀವನದ ಬಗ್ಗೆ ಬೇಸರಗೊಂಡಿರುವುದನ್ನು ಸೂಚಿಸುತ್ತದೆ.

ಈ ಅತೃಪ್ತಿಯು ಉತ್ಪಾದನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಪ್ರವೃತ್ತಿ ಹೊಂದಿದೆ. ಹೀಗಾಗಿ ಕಂಪನಿಗಳು ವೃತ್ತಿಜೀವನ ಬೆಳವಣಿಗೆಗೆ ಹೆಚ್ಚು ಸಾಧ್ಯತೆಗಳನ್ನು ಒದಗಿಸಬೇಕಾಗಿದೆ ಎಂದು ರೈಟ್ ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ಬ್ರಾಮ್ ಲೌಸ್ಕಿ ತಿಳಿಸಿದ್ದಾರೆ.

ಸಮೀಕ್ಷೆಯ ಪ್ರಕಾರ, ಶೇ,. 5ರಷ್ಟು ನೌಕರರು ಮಾತ್ರ ಪ್ರಸಕ್ತ ಸ್ಥಾನದಲ್ಲಿ ಮುಂದುವರಿಯಲು ಇಚ್ಛಿಸಿದ್ದಾರೆ. ಶೇ. 8ರಷ್ಟು ಜನರು 2015ರಲ್ಲಿ ಉದ್ಯೋಗ ಬದಲಾವಣೆ ಅವಕಾಶಗಳಿಗೆ ಕಾಯುವುದಾಗಿ ಸುಳಿವು ನೀಡಿದ್ದಾರೆ. ಹೊಸ ಸವಾಲುಗಳಿಗೆ ನೋಡುವ ನೌಕರರ ಇಚ್ಛೆಯು  ನೌಕರರನ್ನು ಉಳಿಸಿಕೊಳ್ಳಬೇಕೆಂದು ಬಯಸುವ ಸಂಸ್ಥೆಗಳಿಗೆ ಕೆಂಪು ಸಿಗ್ನಲ್ ಆಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ