5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಎಂಟಿಎಸ್‌ ಆಂಡ್ರಾಯ್ಡ್ ಮೊಬೈಲ್

ಬುಧವಾರ, 31 ಆಗಸ್ಟ್ 2011 (18:42 IST)
ಆಂಡ್ರಾಯ್ಡ್ ಆಧಾರಿತ ಎರಡು ಮೊಬೈಲ್‌ಗಳನ್ನು ಪ್ರಮುಖ ಮೊಬೈಲ್ ಸೇವಾ ಸಂಸ್ಥೆ ಎಂಟಿಎಸ್ ಮಂಗಳವಾರ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎರಡೂ ಮೊಬೈಲ್‌ಗಳೂ 5 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯದ್ದಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಂಟಿಎಸ್ ಹೆಸರಿನಲ್ಲಿ ಸಿಸ್ಟೇಮಾ ಶ್ಯಾಮ್ ಟೆಲಿಸರ್ವಿಸ್ ಲಿಮಿಟೆಡ್ (ಎಸ್ಎಸ್‌ಟಿಎಲ್) ಎಂಬ ಕಂಪನಿ ಭಾರತದಾದ್ಯಂತ ದೂರಸಂಪರ್ಕ ಸೇವೆ ಒದಗಿಸುತ್ತಿದೆ.

ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ ಎಸ್ 1 ತಂತ್ರಜ್ಞಾನವನ್ನೂ ನೂತನ ಫೋನ್‌ಗಳು ಒಳಗೊಂಡಿದ್ದು, ಭಾರತದಲ್ಲೇ ಅತೀ ಕಡಿಮೆ ಬೆಲೆಯ ನೂತನ ತಂತ್ರಜ್ಞಾನ ಒಳಗೊಂಡಿರುವ ಮೊಬೈಲ್ ಇದಾಗಿದೆ ಎಂದು ಎಂಟಿಎಸ್‌ನ ಭಾರತೀಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

2.8 ಇಂಚಿನ ಟಚ್ ಸ್ಕ್ರೀನ್, 3.2 ಮೆಗಾಪಿಕ್ಸೆಲ್ ಕೆಮೆರಾ ಸೇರಿದಂತೆ ಟಿವಿ ನೇರ ಪ್ರಸಾರ ಸೌಕರ್ಯ ಒದಗಿಸುವ ಅಪ್ಲಿಕೇಶನನ್ನು ಹವಾಯಿ ಮೂಲದ ಎಂಟಿಎ ಜಿ 3.1 ಮೊಬೈಲ್ ಹೊಂದಿದೆ.

ಗೂಗಲ್ ಮೇಲ್, ಯು ಟೂಬ್, ಗೂಗಲ್ ಟಾಕ್ ಮತ್ತು ಗೂಗಲ್ ಮ್ಯಾಪ್ ಮುಂತಾದ ಇಂಟರ್ನೆಟ್ ಸೇವೆಗಳನ್ನು ತ್ವರಿತ ವೇಗದಲ್ಲಿ ಒದಗಿಸುವ ತಂತ್ರಜ್ಞಾನವನ್ನು ಲೈವ್‌ವೈರ್ ಮೊಬೈಲ್ ಒಳಗೊಂಡಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ