70 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಿರುವ ಕೇಂದ್ರ ಸರಕಾರ

ಭಾನುವಾರ, 27 ಜುಲೈ 2014 (18:08 IST)
ದೇಶ ಎದುರಿಸುತ್ತಿರುವ ಈರುಳ್ಳಿಯ ಕೊರತೆ ನೀಗಿಸಲು ಕೇಂದ್ರ ಸರಕಾರ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಇರಾನ್, ಈಜಿಪ್ಟ್ ಮತ್ತು ಚೀನಾದಿಂದ 70 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದೆ. 

ಕಳೆದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಬಂದ ಭಾರಿ ಬಿರುಗಾಳಿ ಮಳೆ ಮತ್ತು ಮುಂಗಾರು ವಿಳಂಬದಿಂದ ದೇಶದಲ್ಲಿ ಈರುಳ್ಳಿ ಉತ್ಪಾದನೆ ಕುಸಿತ ಕಂಡಿದ್ದರಿಂದ, ಮುಂದಿನ 2 ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳ ಬೇಕಾಯಿತು ಎಂದು ಕೇಂದ್ರ ತಿಳಿಸಿದೆ.
 
ಈರುಳ್ಳಿ ಆಮದಿಗಾಗಿ ಪಾಕಿಸ್ತಾನ, ಚೀನಾ, ಈಜಿಪ್ಟ್ ಮತ್ತು ಇರಾನ್ ರಾಷ್ಟ್ರಗಳಿಂದ ಈರುಳ್ಳಿ ಆಮದಿಗಾಗಿ ಹರಾಜು ಕರೆಯಲಾಗಿದೆ.ಪಾಕಿಸ್ತಾನ ಒಂದರಿಂದಲೇ 40 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುವುದು. ಚೀನಾ, ಈಜಿಪ್ತ್ ಮತ್ತು ಇರಾನ್ ದೇಶಗಳಿಂದ ತಲಾ 10 ಸಾವಿರ್  ಈರುಳ್ಳಿಯನ್ನು ತರಿಸಿಕೊಳ್ಳಲಾಗುವುದು. ಟೆಂಡರ್ ಫೈಲಿಂಗ್  ಮಾಡಲು ಕೊನೆಯ ದಿನಾಂಕ  ಆಗಸ್ಟ್ 2. ಆಗಸ್ಟ್ 2ನೇ ವಾರದಲ್ಲಿ ಮುಂಬಯಿ ಬಂದರಿಗೆ ಮಾಲು ಬಂದಿಳಿಯಲಿದೆ ಎಂದು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ