8 ತಿಂಗಳಲ್ಲೇ ಶೇ.9.22ರ ಕನಿಷ್ಠ ಮಟ್ಟಕ್ಕಿಳಿದ ಹಣದುಬ್ಬರ

ಮಂಗಳವಾರ, 16 ಆಗಸ್ಟ್ 2011 (19:00 IST)
ಆಹಾರ ಉತ್ಪನ್ನಗಳಲ್ಲಿ ಹೆಚ್ಚಿದ ಬೆಲೆ ಏರಿಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕುಸಿತದ ಪರಿಣಾಮ ಉತ್ಪಾದನೆಯಲ್ಲಿ ಒತ್ತಡ ಹೆಚ್ಚಿದ್ದರಿಂದ ಜುಲೈ ತಿಂಗಳ ಸಮಗ್ರ ಹಣದುಬ್ಬರ ಪ್ರಮಾಣ ಕಳೆದ ಎಂಟು ತಿಂಗಳಲ್ಲೇ ಶೇಕಡಾ 9.22 ರ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಅಳೆಯಲಾಗುವ ಹಣದುಬ್ಬರವು, ಜೂನ್ ತಿಂಗಳಲ್ಲಿ ಶೇಕಡಾ 9.44 ಕ್ಕೆ ತಲುಪಿತ್ತು ಹಾಗೂ ಕಳೆದ ವರ್ಷದ ಜುಲೈ ವೇಳೆಗೆ ಇದು ಶೇಕಡಾ 9.98 ರಷ್ಟಿತ್ತು.

ಮಂಗಳವಾರ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ವಾರ್ಷಿಕ ಹಣದುಬ್ಬರ ದರ ಏರುಗತಿಯಲ್ಲೇ ಸಾಗುತ್ತಿದ್ದು, ಕಳೆದ ಮೇ ತಿಂಗಳ ವೇಳೆಗೆ ಅಂದಾಜಿಸಲಾಗಿದ್ದ ಶೇಕಡಾ 9.06 ರ ಪ್ರಮಾಣವನ್ನು ಏರಿಸಿ ಶೇಕಡಾ 9.56 ರಷ್ಟಕ್ಕೆ ನಿಗದಿಪಡಿಸಲಾಗಿತ್ತು.

ವಾರ್ಷಿಕ ಸರಾಸರಿ ನೋಡಿದರೆ, ಈ ವರ್ಷ ಆಹಾರ ಉತ್ಪನ್ನಗಳ ಬೆಲೆ ಶೇಕಡಾ 8.19ಕ್ಕೆ ಏರಿಕೆಯಾಗಿದ್ದು, ಇದು ಜೂನ್ ತಿಂಗಳ ವೇಳೆಗೆ ದಾಖಲಾಗಿದ್ದ ಶೇಕಡಾ 8.38 ಕ್ಕಿಂತ ಕಡಿಮೆ.

ಈ ಕುರಿತು ಮಾತನಾಡಿರುವ ಪ್ರಧಾನಿ ಮನಮೋಹನ ಸಿಂಗ್, ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳ ಬೆಲೆ ವಿಪರೀತ ಏರುತ್ತಿದ್ದು, ಈ ಉತ್ಪನ್ನಗಳನ್ನು ನಾವು ಯಥೇಚ್ಚವಾಗಿ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಕಂಡರೆ ಅದರ ಪ್ರಭಾವ ನಮ್ಮ ದೇಶದ ಮೇಲೂ ಆಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ