83,000 ಕೋಟಿಯ ವಿದ್ಯುತ್ ಯೋಜನೆಗೆ ಅನುಮೋದನೆ

ಮಂಗಳವಾರ, 27 ಆಗಸ್ಟ್ 2013 (17:30 IST)
PR
ಹೂಡಿಕೆಗೆ ಸಂಬಂದಿಸಿದ 83,772 ಕೋಟಿಯ 18 ವಿದ್ಯುತ್ ಯೋಜನೆ ಮತ್ತು 92,500 ಕೋಟಿಯ ಇತರ ಯೋಜನೆಗಳಿಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಅನುಮೋದನೆ ನೀಡಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಈಗಾಗಲೆ ವಿಭಿನ್ನ ಬ್ಯಾಂಕುಗಳು ವಿದ್ಯುತ್ ಯೋಜನೆಗಳಿಗೆ 30,000 ಕೋಟಿ ರೂಪಾಯಿ ನೀಡಿವೆ. ವಿದ್ಯುತ್ ಯೋಜನೆಗೆ ಇಂಧನ ಪೂರೈಕೆ ಒಪ್ಪಂದ ಆಗಸ್ಟ್ 31 ರವರೆಗೆ ಪೂರ್ಣಗೊಳ್ಳಲಿದೆ ಮತ್ತು ಕೆಲವು ಎಫ್ಎಸ್ಎಬಾಕಿ ಊಳಿದಿದ್ದರೆ ಅವುಗಳನ್ನು ಸಪ್ಟೆಂಬರ್ ವರೆಗು ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಪೆಟ್ರೊಲಿಯಂ ಮತ್ತು ನೈಸರ್ಗಿಕ್ ಅನಿಲ, ರಸ್ತೆ, ರೈಲ್ವೆ ಮತ್ತು ಉಕ್ಕಿನ ಕ್ಷೇತ್ರಗಳು ಸೇರಿದಂತೆ ಇತರ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಬ್ಯಾಂಕ್‌ಗಳು ಇತರ ಯೋಜನೆಗಳಿಗೆ 26,000 ಕೋಟಿ ರೂಪಾಯಿ ನೀಡಿವೆ ಎಂದು ಸಚಿವ ಪಿ ಚಿದಂಬರಂ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ