ಕಳ್ಳನನ್ನು ಕೊಂದ ಯಮರಾಜನ ವಾಹನ ಕೋಣ

ಬುಧವಾರ, 25 ಫೆಬ್ರವರಿ 2015 (13:08 IST)
ಆಗ್ರಾಕ್ಕೆ ಸರಿಸುಮಾರು 25 ಕಿಮೀ ದೂರದ ನಾಗ್ಲಾ ಮಣಿ ಗ್ರಾಮದಲ್ಲಿ ಕೋಣವೊಂದು ಯಮಸ್ವರೂಪಿಯಾಗಿ ತನ್ನ ಕದಿಯಲು ಬಂದ ವ್ಯಕ್ತಿಯನ್ನು ಕೊಂದಿರುವ ಘಟನೆ ಸಂಭವಿಸಿದೆ. ಭಾನುವಾರ ರಾತ್ರಿ ವ್ಯಕ್ತಿಯೊಬ್ಬ ಕೋಣವನ್ನು ಕದಿಯಲು ಬಂದ ವ್ಯಕ್ತಿ ಅದರ ಕೊರಳಿಗೆ ಕೈಹಾಕಿ ಎಳೆದುಕೊಂಡು ಹೋದ.

ಆದರೆ ಮೈದಾನವೊಂದಕ್ಕೆ ತಲುಪುತ್ತಿದ್ದಂತೆ ಕೋಣ ಓಡಲು ಆರಂಭಿಸಿತು. ವ್ಯಕ್ತಿಯ ಕೈ ಕೋಣದ ಕೊರಳಿನ ಸರಪಳಿಗೆ ಸಿಕ್ಕಿಕೊಂಡಿದ್ದರಿಂದ ಸುಮಾರು 2 ಕಿಮೀ ದೂರದವರೆಗೆ ಕೋಣ ಅವನನ್ನು ದರದರನೇ ಎಳೆದುಕೊಂಡು ಹೋಗಿದ್ದರಿಂದ ಅವನು ಮೃತಪಟ್ಟಿದ್ದಾನೆ.   ಎದೆ, ತಲೆ ಮತ್ತು ಹೊಟ್ಟೆಗೆ ಉಂಟಾದ ತೀವ್ರ ಗಾಯಗಳಿಂದ ಅವನು ಮೃತಪಟ್ಟಿದ್ದಾನೆ. ಕಳ್ಳನ ದೇಹಕ್ಕೆ ವಾರಸುದಾರರು ಇದುವರೆಗೆ ಯಾರೂ ಬಂದಿಲ್ಲವೆಂದು ಪೊಲೀಸರು ಹೇಳಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಕೋಣದ ಮಾಲೀಕ ಸತ್ಯಪ್ರಕಾಶ್ ಸೋಮವಾರ ಬೆಳಿಗ್ಗೆ ಎದ್ದು ತನ್ನ ಮನೆಯ ಹೊರಗೆ ಜನರು ನೆರೆದಿರುವುದನ್ನು ಕಂಡ. ಅವನ ಕೋಣ ರಾಮ್ ಪ್ಯಾರಿ ಶೆಡ್ ಹೊರಗಿದ್ದು, ಅದರ ಪಕ್ಕದಲ್ಲಿ ವ್ಯಕ್ತಿಯ ಶವ ಬಿದ್ದಿತ್ತು.  ಕೋಣ ಕಳ್ಳನನ್ನು ಕೊಂದ ಸುದ್ದಿ ಸಮೀಪದ ಗ್ರಾಮಗಳಿಗೆ ಹಬ್ಬಿ ಅನೇಕ ಜನರು ಆ ಕೋಣನನ್ನು ನೋಡಲು ಸೇರಿದರು. ಯಮರಾಜನ ವಾಹನದ ಪ್ರತಿರೂಪ ಎಂದು ಜನರು ಕೋಣನನ್ನು ನೋಡಿ ಉದ್ಗರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ