100 ಕೋಟಿ ಗಡಿಯನ್ನು ದಾಟಲಿರುವ ಆಧಾರ್, ಸರ್ಕಾರದ ಯೋಜನೆಗಳಿಗೆ ಚೈತನ್ಯ

ಶನಿವಾರ, 2 ಏಪ್ರಿಲ್ 2016 (13:42 IST)
ಆಧಾರ್ ಕಾರ್ಡ್ ನೋಂದಣಿಗಳು ಇನ್ನು ಕೆಲವೇ ದಿನಗಳಲ್ಲಿ 100 ಕೋಟಿ ಗಡಿಯನ್ನು ದಾಟಲಿವೆ. ಈ ಬೆಳವಣಿಗೆಯಿಂದ ಸರ್ಕಾರಕ್ಕೆ ಸಬ್ಸಿಡಿಗಳನ್ನು ಮತ್ತು ವಿವಿಧ ಸಾಮಾಜಿಕ ಕ್ಷೇತ್ರ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ನೇರವಾಗಿ ಒದಗಿಸುವ ಯೋಜನೆಗೆ ಚೈತನ್ಯ ನೀಡಲಿದೆ.
 
ಆಧಾರ್ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ವಿಶಿಷ್ಟಗುರುತು ಪತ್ರ ಪ್ರಾಧಿಕಾರದ ವೆಬ್‌ಸೈಟ್ ಪ್ರಕಾರ, ಆಧಾರ್ ಕಾರ್ಡ್‌ಗಳನ್ನು ಈವರೆಗೆ ಒಟ್ಟು 99. 1 ಕೋಟಿಯನ್ನು ವಿತರಿಸಲಾಗಿದೆ. ಪೋರ್ಟಲ್ ಎಣಿಕೆಗಳನ್ನು, ವರದಿಗಳನ್ನು ನಿರ್ವಹಣೆ ಚಟುವಟಿಕೆ ಹಿನ್ನೆಲೆಯಲ್ಲಿ ಪರಿಷ್ಕರಿಸಲಾಗಿಲ್ಲ. ಪೋರ್ಟಲ್ ಸದ್ಯದಲ್ಲೇ ಪರಿಷ್ಕರಿಸಲಾಗುತ್ತದೆ.
ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಸೋಮವಾರ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಆಧಾರ್ ನೋಂದಣಿಗಳ 100 ಕೋಟಿ ಗಡಿಯನ್ನು ಪ್ರಕಟಿಸಲಿದ್ದಾರೆ.  ಸರ್ಕಾರ ಈಗಾಗಲೇ ಆಧಾರ್ ಮಸೂದೆಗೆ ಅನುಮೋದನೆ ನೀಡಿದ್ದು, ಯೋಜನೆಗೆ ಕಾನೂನಾತ್ಮಕ ಬೆಂಬಲ ನೀಡಿದೆ. 
 
ಆಧಾರ ನೋಂದಣಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಆಧಾರ್ ಪತ್ರವನ್ನು ವಿವಿಧ ಸಾಮಾಜಿಕ ಕ್ಷೇತ್ರದ ಯೋಜನೆಗಳನ್ವಯ ಸಬ್ಸಿಡಿಗಳನ್ನು ಮತ್ತು ಸೌಲಭ್ಯಗಳನ್ನು ನೀಡುವ ಅಸ್ತ್ರವಾಗಿ ಬಳಸಲು ಸರ್ಕಾರ ಬಯಸಿದೆ.
 
 ನೇರ ಸೌಲಭ್ಯ ವರ್ಗಾವಣೆ ಯೋಜನೆ ಅಡಿಯಲ್ಲಿ, ವಿದ್ಯಾರ್ಥಿವೇತನ, ಪಿಂಚಣಿ ಮತ್ತು ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ನಕಲಿ ಫಲಾನುಭವಿಗಳನ್ನು ನಿವಾರಿಸಲು ಮತ್ತು  ವಿವಿಧ ಸಾಮಾಜಿಕ ಕ್ಷೇತ್ರ ಯೋಜನೆಗಳ ವೆಚ್ಚದಲ್ಲಿ ಸೋರಿಕೆಯನ್ನು ತಡೆಯುವುದಕ್ಕಾಗಿ ಜನರ ಗುರುತನ್ನು ದೃಢೀಕರಿಸುವ ಅಸ್ತ್ರವಾಗಿ ಆಧಾರ್ ಬಳಸಲು ಸರ್ಕಾರ ಇಚ್ಛಿಸಿದೆ.

ವೆಬ್ದುನಿಯಾವನ್ನು ಓದಿ