ಹೊಸ ಬಣ್ಣದೊಂದಿಗೆ ಮತ್ತೆ ಬರಲಿದೆ ಒಂದು ರೂಪಾಯಿ ನೋಟು

ಶನಿವಾರ, 27 ಡಿಸೆಂಬರ್ 2014 (12:01 IST)
ಹೊಸ ಬಣ್ಣದೊಂದಿದೆ ಒಂದು ರೂಪಾಯಿ ನೋಟುಗಳು ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡಲಿವೆ. ಎರಡು ದಶಕಗಳ ನಂತರ ಪುನಃ 1 ರೂಪಾಯಿ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 
1, 2 ಮತ್ತು 5 ರೂಪಾಯಿಯ ನಾಣ್ಯಗಳು ಚಲಾವಣೆಗೆ ಬಂದ ನಂತರ ಈ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಆದರೆ ಐದು ರೂಪಾಯಿ ನೋಟುಗಳ ಮುದ್ರಣವನ್ನು ಪುನಃ ಪ್ರಾರಂಭಿಸಲಾಗಿತ್ತು. ಈಗ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ಸಹ ಮತ್ತೆ ಆರಂಭಿಸಲಾಗಿದೆ.  
 
ಹೊಸ ವರ್ಷಕ್ಕೆ ಒಂದು ರೂಪಾಯಿ ನೋಟುಗಳು ನಿಮ್ಮ ಕೈಯ್ಯಲ್ಲಿ ಓಡಾಡಲಿವೆ. 
 
ರಿಸರ್ವ್ ಬ್ಯಾಂಕ್ ಬದಲಾಗಿ ಭಾರತ ಸರ್ಕಾರದ ಮುದ್ರಣ ಕಾರ್ಖಾನೆಯಲ್ಲಿ ರೂಪಾಯಿ ನೋಟುಗಳ ಮುದ್ರಣವನ್ನು ಮಾಡಲಾಗುವುದು ಎಂದು ತಿಳಿದು ಬಂದಿದೆ. 
 
ತನ್ನ ಈ ನಿರ್ಧಾರಕ್ಕೆ ಸರಕಾರ ಯಾವ ಕಾರಣವನ್ನು ನೀಡಿಲ್ಲ. ಆದರೆ ನಾಣ್ಯಗಳ ಕೊರತೆ ಮತ್ತು ನಾಣ್ಯಗಳನ್ನು ಕರಗಿಸುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ  ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
 
ಈ ಹಿಂದೆ ಇದ್ದ ಇಂಡಿಗೋ ಬಣ್ಣದ ಬದಲಿಗೆ ಹಸಿರು ಮತ್ತು ಗುಲಾಬಿ ಮಿಶ್ರಿತ ಬಣ್ಣದಲ್ಲಿ ನೋಟುಗಳು ಮುದ್ರಣಗೊಳ್ಳಲಿವೆ. 

ವೆಬ್ದುನಿಯಾವನ್ನು ಓದಿ