ಮ್ಯಾಗಿ ನೂಡಲ್ಸ್ ಬಳಿಕ ಟಾಪ್ ರಾಮೆನ್ ನೂಡಲ್ಸ್‌ ಮಾರುಕಟ್ಟೆಯಿಂದ ವಾಪಸ್

ಸೋಮವಾರ, 29 ಜೂನ್ 2015 (20:22 IST)
ಮ್ಯಾಗಿ ನೂಡಲ್ಸ್ ಕುರಿತು ವಿವಾದ ಉದ್ಭವಿಸಿ  ಮಾರುಕಟ್ಟೆಯಿಂದ ನಿಷೇಧಿಸಿದ ಬಳಿಕ ಇಂಡೋ ನಿಸ್ಸಾನ್ ಫುಡ್ಸ್ ಸಂಸ್ಥೆಯು ತಾನು ತಯಾರಿಸುವ ಟಾಪ್ ರಾಮೆನ್ ನೂಡಲ್ಸ್ ಬ್ರಾಂಡ್ ಅನ್ನು ಭಾರತದ ಮಾರುಕಟ್ಟೆಯಿಂದ ವಾಪಸ್ ಪಡೆಯುವುದಾಗಿ ತಿಳಿಸಿದೆ. ಕೇಂದ್ರ ಆಹಾರ ಸುರಕ್ಷತೆ ನಿಯಂತ್ರಕ ಸಂಸ್ಥೆ ಎಫ್‌ಎಸ್‌ಎಸ್‌ಎಐ ಈ ಕುರಿತು ಆದೇಶ ನೀಡಿದೆ.
 
ಈ ತಿಂಗಳಾರಂಭದಲ್ಲಿ ನೆಸ್ಲೆ ಮ್ಯಾಗಿ ನೂಡಲ್ಸ್ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಹಿಂದುಸ್ಥಾನ್ ಲಿವರ್ ಕೂಡ ನಾರ್ ಇನ್‌ಸ್ಟಂಟ್ ನೂಡಲ್ಸ್ ಬ್ರಾಂಡನ್ನು ಸುರಕ್ಷತೆ ಮತ್ತು ನಿಯಂತ್ರಕ ವಿಷಯಗಳಿಗಾಗಿ ಸ್ಥಗಿತಗೊಳಿಸಿದೆ. 
 
ಎಫ್ಎಸ್ಸೆಸ್ಸೆಎಐ ನೆಸ್ಲೆ ಇಂಡಿಯಾ ಮ್ಯಾಗಿ ನೂಡಲ್ಸ್‌ಗೆ ನಿಷೇಧ ವಿಧಿಸಿದ ಬಳಿಕ ಇನ್‌ಸ್ಟೆಂಟ್ ನೂಡಲ್ಸ್‌ಗಳು ನಿಯಂತ್ರಕರ ಗಮನಸೆಳೆದಿವೆ. ಈ ತಿಂಗಳಲ್ಲಿ ನಿಯಂತ್ರಕವು ನೂಡಲ್ಸ್, ಪಾಸ್ಟಾಸ್, ಮೆಕರೋನಿ ಬ್ರಾಂಡ್‌ಗಳಾದ ರಾಮೆನ್, ಫೂಡಲ್ಸ್ ಮತ್ತು ವಾಯ್ ವಾಯ್ ಮುಂತಾದ ಏಳು ಕಂಪನಿಗಳು ಮಾರುವ ಉತ್ಪನ್ನಗಳ ನಿಯಮ ಪಾಲನೆ ಪರೀಕ್ಷೆಗೆ ಆದೇಶ ನೀಡಿತ್ತು.

ಇವುಗಳ ಪೈಕಿ ನೆಸ್ಲೆ ಇಂಡಿಯಾ, ಐಟಿಸಿ, ಇಂಡೋ ನಿಸ್ಸಾನ್ ಫುಡ್, ಜಿಎಸ್‌ಕೆ ಹೆಲ್ತ್ ಕೇರ್, ಸಿಜಿ ಫುಡ್ಸ್ ಇಂಡಿಯಾ, ರುಚಿ ಇಂಟರ್ ನ್ಯಾಷನಲ್ ಮತ್ತು ಎಎ ನ್ಯೂಟ್ರಿಷನ್ ಮುಂತಾದವು ಸೇರಿವೆ. 
 

ವೆಬ್ದುನಿಯಾವನ್ನು ಓದಿ