ವಿದೇಶದ ಕಂಪೆನಿಯನ್ನು ಹಿಂದಕ್ಕೆ ಹಾಕಿದ ವೊಲ್ಟಾಸ್‌‌‌

ಮಂಗಳವಾರ, 22 ಏಪ್ರಿಲ್ 2014 (15:52 IST)
ಏರ್‌‌ಕಂಡಿಶ್‌‌ನರ್ ಉತ್ಪಾದಿಸುವ ಭಾರತ ಮೂಲದ ಕಂಪೆನಿ ವೊಲ್ಟಾಸ್‌‌‌‌ ಉತ್ಪಾದನೆ ಮತ್ತು ಮಾರಾಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕೋರಿಯಾದ ಎರಡು ದೊಡ್ಡ ಕಂಪೆನಿಗಳಾದ ಎಲ್‌ಜಿ ಮತ್ತು ಸ್ಯಾಮಸುಂಗ್‌‌ನ ಉತ್ಪಾದನೆ ಮತ್ತು ಮಾರಾಟವನ್ನು ವೊಲ್ಟಾಸ್‌‌ ಹಿಂದಕ್ಕೆ ಹಾಕಿದೆ. 
 
14 ವರ್ಷದ ನಂತರ ಮೊದಲ ಸ್ಥಾನ ಪಡೆದುಕೊಂಡ ಭಾರತ ವೊಲ್ಟಾಸ್‌‌‌ ಈಗ ಅಗ್ರ ಶ್ರೇಣಿಯಲ್ಲಿದೆ. ಟಾಟಾ ಸಮೂಹದ ಈ ಕಂಪೆನಿ ಕಳೆದ ವರ್ಷ ಈ ಕೋರಿಯಾದ ಕಂಪೆನಿಯಾದ ಎಲ್‌‌ಜಿಯನ್ನ ಹಿಂದಕ್ಕೆ ಹಾಕಿತ್ತು. ಇಲ್ಲಿಯವರೆಗೆ ಈ ಕೋರಿಯಾದ ಕಂಪೆನಿಗಳನ್ನು ಯಾವುದೇ ಭಾರತೀಯ ಕಂಪೆನಿ ಹಿಂದಕ್ಕೆ ಹಾಕಲು ಸಾಧ್ಯವಾಗಿರಲಿಲ್ಲ ಆದರೆ ಈಗ ಈ ದಾಖಲೆ ವೊಲ್ಟಾಸ್‌‌ ಮಾಡಿದೆ. 
 
ವೊಲ್ಟಾಸ್‌‌‌‌‌‌‌ನ ಎಸಿ ಈಗ ಮಾರುಕಟ್ಟೆಯಲ್ಲಿ ತನ್ನ ಉತ್ಪಾದಿತ ಎಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದೆ. 
 
2013ರಿಂದ ವೊಲ್ಟಾಸ್‌ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೂ ಕೂಡ ಈಗಲೂ ಕೋರಿಯಾದ ಕಂಪೆನಿ ಎಲ್‌‌ಜಿ ತನ್ನ ಸ್ಟೋರ್‌ ಮತ್ತು ಮಲ್ಟಿ ಸ್ಟೋರ್‌‌‌ಗಳಲ್ಲಿ ಮಾರ್ಕೆಟ್‌ ಲೀಡರ್‌ ಆಗಿದೆ. ಈ ವಿಷಯದಲ್ಲಿ ಎಲ್‌ಜಿಯ ಹತ್ತಿರ ಶೇ.22 ರಷ್ಟು ಶೇರುಗಳಿವೆ ಆದರೆ ವೊಲ್ಟಾಸ್‌‌ಹತ್ತಿರ ಶೇ.18 ಮತ್ತು ಸ್ಯಾಮಸುಂಗ್‌‌‌ ಹತ್ತಿರ ಶೇ.14 ರಷ್ಟು ಶೇರುಗಳಿವೆ,. ಎಲ್‌‌ಜಿ ಈ ಶೇರುಗಳನ್ನು ಹೆಚ್ಚಿಸಿ ಶೇ.25ರವರೆಗೆ ತಲುಪಲು ಪ್ರಯತ್ನದಲ್ಲಿದೆ. ಈ ಮೂಲಕ ಕಂಪೆನಿ ತನ್ನ ಹೊಸ ಮಾಡೆಲ್‌‌ಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ವೆಬ್ದುನಿಯಾವನ್ನು ಓದಿ