ಭಾರತ ವಿಮಾನ ಪ್ರಯಾಣಿಕರಿಗೆ ಸದ್ಯದಲ್ಲೇ ವೈಫೈ ಸೌಲಭ್ಯ

ಶನಿವಾರ, 28 ಮಾರ್ಚ್ 2015 (15:58 IST)
ಭಾರತದಲ್ಲಿ ವಿಮಾನ ಪ್ರಯಾಣಿಕರಿಗೆ ಮುಂಬರುವ ತಿಂಗಳುಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ  ವೆಬ್ ಸರ್ಫ್ ಮಾಡುವ ಸೌಲಭ್ಯ ಸಿಗಲಿದೆ. ಸರ್ಕಾರ ಅಂತಿಮವಾಗಿ ಫ್ಲೈಟ್‌ಗಳಲ್ಲಿ ವೈಫೈ ಆಧಾರದ ಅಂತರ್ಜಾಲ ಸಂಪರ್ಕಗಳನ್ನು ನೀಡಲು ಉದ್ದೇಶಿಸಿದ್ದು, ಏರ್‌ಲೈನ್ಸ್ ಮತ್ತು ಪ್ರಯಾಣಿಕರ ದೀರ್ಘಾವಧಿಯ ಬೇಡಿಕೆಯನ್ನು ಪೂರೈಸಲಾಗುತ್ತದೆ.

ನಮ್ಮ ಸಚಿವಾಲಯವು ದೂರಸಂಪರ್ಕ ಇಲಾಖೆಯನ್ನು ಈ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಿದ್ದು, ಔಪಚಾರಿಕ ಪ್ರಕಟಣೆಯನ್ನು ಶೀಘ್ರದಲ್ಲೇ ಮಾಡುತ್ತಾರೆಂದು ನಾಗರಿಕ ಯಾನ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದರು. (ದೂರಸಂಪರ್ಕ ಇಲಾಖೆ) ಡಿಒಟಿ ಈಗಾಗಲೇ ಈ ಪ್ರಸ್ತಾವನೆಯನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವೆಂದು ಹೇಳಿರುವುದಾಗಿ ಅವರು ತಿಳಿಸಿದರು. ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲು ನಿರ್ವಾಹಕರಿಗೆ ತರಂಗಾಂತರ ಸಾಮರ್ಥ್ಯವನ್ನು ಡಿಒಟಿ ಮಂಜೂರು ಮಾಡುತ್ತದೆ.

ಭಾರತದಲ್ಲಿ ವಿದೇಶಿ ಏರ್‌ಲೈನ್ಸ್‌ಗಳಾದ ಎಮಿರೇಟ್ಸ್, ಲುಫ್ತಾನ್ಸಾ, ಮತ್ತು ಟರ್ಕಿ ಏರ್‌ಲೈನ್‌ಗಳಲ್ಲಿ ಮಾತ್ರ ಅಂತರ್ಜಾಲದ ಸಂಪರ್ಕಗಳಿರುತ್ತವೆ.  ಬಜೆಟ್ ಏರ್‌ಲೈನ್ ಸ್ಪೈಸ್‌ಜೆಟ್ ಸಿಒಒ ಸಂಜೀವ್ ಕಪೂರ್ ಅನೇಕ ಏರ್‌ಲೈನ್‌ಗಳು ಈ ಪ್ರಸ್ತಾವನೆಯಲ್ಲಿ ಆಸಕ್ತಿ ಹೊಂದಿವೆ ಎಂದಿದ್ದಾರೆ. ಅಮೆರಿಕದಲ್ಲಿ ಇಂದಿನ ದಿನಗಳಲ್ಲಿ ವೈ-ಫೈ ಸೌಲಭ್ಯವಿಲ್ಲದ ಫ್ಲೈಟ್ ಅಪರೂಪವಾಗಿರುತ್ತದೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ