ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ಬಂಪರ್ ಕೊಡುಗೆ

ಬುಧವಾರ, 21 ಡಿಸೆಂಬರ್ 2016 (08:55 IST)
ಈಗಾಗಲೆ ಪ್ರೀಪೇಯ್ಡ್ ಗ್ರಾಹಕರಿಗೆ ಕೊಡುಗೆ ನೀಡಿರುವ ಏರ್‌ಟೆಲ್ ಈಗ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಆಫರ್‌ಗಳನ್ನು ಪ್ರಕಟಿಸಿದೆ. ರೂ. 549 ಪ್ಲಾನ್ ಮೂಲಕ ಗ್ರಾಹಕರಿಗೆ ಯಾವುದೇ ನೆಟ್‌ವರ್ಕ್‌ಗೆ ಲೋಕಲ್ ಮತ್ತು ಎಸ್‌ಟಿಡಿ ಅನಿಯಮಿತ ಕಾಲಿಂಗ್, ರೋಮಿಂಗ್‌ನಲ್ಲಿ ಇನ್‌ಕಮಿಂಗ್, ವಿಂಕ್ ಮ್ಯೂಸಿಕ್, ವಿಂಕ್ ಮೂವೀಸ್ ತಿಂಗಳ ಚಂದಾವನ್ನು ಉಚಿತವಾಗಿ ಕೊಡಲಿದೆ.
 
ದಿನಕ್ಕೆ 100 ಎಸ್‌ಎಂಎಸ್‍ಗಳು, 3ಜಿ ಹ್ಯಾಂಡ್‌ಸೆಟ್ ಇರುವವರಿಗೆ 1ಜಿಬಿ, 4ಜಿ ಹ್ಯಾಂಡ್‌ಸೆಟ್ ಗ್ರಾಹಕರಿಗೆ 3ಜಿಬಿ ಡಾಟಾವನ್ನು ಉಚಿತವಾಗಿ ನೀಡಲಿದೆ ಎಂದು ತಿಳಿಸಿದೆ. ರೂ.799 ಪ್ಲಾನ್ ಗ್ರಾಹಕರಿಗೆ ರೂ.549 ಪ್ಲಾನ್‌ ಆಫರ್‌ಗಳನ್ನೇ ಕೊಡುತ್ತಿದೆ. 
 
ಇದರ ಜೊತೆಗೆ 4ಜಿ ಹ್ಯಾಂಡ್‌ಸೆಟ್ ಇರುವವರಿಗೆ 5 ಜಿಬಿ ಡಾಟಾ, 3ಜಿ ಹ್ಯಾಂಡ್‍ಸೆಟ್ ಗ್ರಾಹಕರಿಗೆ 3ಜಿಬಿ ಡಾಟಾ ಉಚಿತವಾಗಿ ಕೊಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಇವುಗಳೊಂದಿಗೆ ರೂ.1,199 ಪ್ಯಾಕನ್ನು ಕಂಪನಿ ಅಪ್‌ಗ್ರೇಡ್ ಮಾಡಿ ಕೆಲವು ವಿಶೇಷ ರಿಯಾತಿಗಳನ್ನು ಘೋಷಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ