ಭಾರತದಲ್ಲಿ ಉದ್ಯಮ ಸ್ಥಾಪನೆಗೆ ಆಲಿಬಾಬಾ ಕಣ್ಣು

ಶುಕ್ರವಾರ, 28 ನವೆಂಬರ್ 2014 (20:16 IST)
ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಈ-ದೈತ್ಯ ಆಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ಭಾರತದಲ್ಲಿ ಉದ್ಯಮ ಸ್ಥಾಪನೆಗೆ ಕಣ್ಣಿರಿಸಿದ್ದಾರೆ. ಭಾರತದಲ್ಲಿ ಹೆಚ್ಚು ಹಣ ಹೂಡುವ ಮೂಲಕ ಭಾರತದ ಪ್ರತಿಭೆಗಳನ್ನು ಅವರು  ನೇಮಿಸಿಕೊಳ್ಳುವ ನಿರೀಕ್ಷೆಯಿದೆ.

ಎಫ್‌ಐಸಿಸಿಐ ಈವೆಂಟ್‌ನಲ್ಲಿ ಭಾರತದ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಾವು ಇಲ್ಲಿ ಬಂಡವಾಳ ಹೂಡುತ್ತೇವೆ ಎಂದರು. ಇಲ್ಲಿ  ಆನ್‌ಲೈನ್ ವಾಣಿಜ್ಯಕ್ಕೆ ಉತ್ತೇಜನ ಸಿಕ್ಕಿರುವಾಗ ಅವರ ಕಂಪೆನಿ ಹೆಚ್ಚು ಹಣ ಹೂಡಿಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

1999ರಲ್ಲಿ ಆಲಿಬಾಬಾ ಕಂಪನಿ ಆರಂಭಿಸಿದ ಚೀನಾ ಉದ್ಯಮಿ ಅಮೆರಿಕದಲ್ಲಿ 25 ಶತಕೋಟಿ ಡಾಲರ್ ಲಾಭ ಗಳಿಸಿದ್ದರು. 

ವೆಬ್ದುನಿಯಾವನ್ನು ಓದಿ